ಬೆಂಗಳೂರು: ನಟ ದರ್ಶನ್ ‘ಡೆವಿಲ್’ ಸಿನಿಮಾದ ಚಿತ್ರೀಕರಣವನ್ನು ಇತ್ತೀಚೆಗಷ್ಟೆ ಪೂರ್ತಿ ಮಾಡಿದ್ದಾರೆ. ಈ ಮಧ್ಯೆ ದೇವರ ಮೊರೆ ಹೋಗಿದ್ದಾರೆ.
ನಟ ದರ್ಶನ್, ಪತ್ನಿ ವಿಜಯಲಕ್ಷ್ಮಿ, ಮಗ ವಿನೀತ್ ಹಾಗೂ ಧನ್ವೀರ್ ಗೌಡ ಜೊತೆಯಲ್ಲಿ ಕೇರಳದ ಕಣ್ಣೂರಿನ ಪ್ರಸಿದ್ಧ ಮಾಡಾಯಿಕಾವು ಭಗವತೀ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಈ ದೇವಸ್ಥಾನದಲ್ಲಿ ಶತ್ರು ಸಂಹಾರ ಹೋಮಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ದರ್ಶನ್ ಅವರು ಕುಟುಂಬ ಸಮೇತ ಇಲ್ಲಿಗೆ ಬಂದಿರುವುದು ಕೂಡ ಹಲವಾರು ಅನುಮಾನಕ್ಕೆ ದಾರಿ ಮಾಡಿ ಕೊಟ್ಟಿದೆ.
ಈ ದೇವಸ್ಥಾನದಲ್ಲಿ ಪಾರ್ವತಿ ರುದ್ರಕಾಳಿಯ ಅವತಾರದಲ್ಲಿ ಸಂಚರಿಸುತ್ತಾಳೆ. ಹೀಗಾಗಿ ರಾತ್ರಿ 8 ಗಂಟೆಯ ನಂತರ ಪೂಜಾರಿಗಳನ್ನು ಹೊರತು ಪಡಿಸಿದರೆ ಈ ದೇವಸ್ಥಾನದಲ್ಲಿ ಬೇರೆ ಯಾರೂ ಇರುವಂತಿಲ್ಲ. ಇಲ್ಲಿ ಪೂಜೆ ಮಾಡುವವರಿಗೆ ಮಾಂಸವನ್ನು ಪ್ರಸಾದವನ್ನಾಗಿ ನೀಡಲಾಗುತ್ತದೆ. ಇಲ್ಲಿ ಪೂಜೆ ಮಾಡುವ ಕೆಲ ಬ್ರಾಹ್ಮಣರು ಸಹ ಮಾಂಸಾಹಾರವನ್ನು ಪ್ರಸಾದವಾಗಿ ಸ್ವೀಕರಿಸುತ್ತಾರೆ ಎನ್ನಲಾಗುತ್ತಿದೆ.
ಈ ದೇವಾಲಯದಲ್ಲಿ ಶತ್ರು ಸಂಹಾರ ಪೂಜೆ ಬಹಳ ವಿಶೇಷವಾಗಿದೆ. ಈ ಪೂಜೆಯನ್ನು ತುಂಬಾ ಗೌಪ್ಯವಾಗಿ ನಡೆಸುತ್ತಾರೆ ಎನ್ನಲಾಗಿದೆ. ಈ ದೇವಸ್ಥಾನದಲ್ಲಿ 8 ಪೂಜೆಗಳನ್ನು ಮಾಡುತ್ತಾರೆ. ಎನ್ನಲಾಗಿದೆ.