ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಇಂದಿನಿಂದ ಡೆವಿಲ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ.
ಇಂದಿನಿಂದ ನಾಲ್ಕು ದಿನಗಳ ಕಾಲ ಮೈಸೂರಿನ ಲಲಿತಾಮಹಲ್, ಸರ್ಕಾರಿ ಬಂಗಲೆ, ಚಾಮುಂಡಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿತ್ರದ ಶೂಟಿಂಗ್ ನಡೆಯಲಿದ್ದು, ನಟ ದರ್ಶನ್ ಅಭಿನಯದ ಕೆಲ ದೃಶ್ಯಗಳನ್ನು ನಿರ್ದೇಶಕ ಪ್ರಕಾಶ್ ಸೆರೆ ಹಿಡಿಯಲಿದ್ದಾರೆ