ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳು ಕೋರ್ಟ್ ಮುಂದೆ ಹಾಜರಾಗಿದ್ರು. ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ ನ್ಯಾಯಾಲಯದ ಮುಂದೆ ಹಾಜರಾಗಿದ್ರು. ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ ಗೆ ಬಂದ ದರ್ಶನ್ ನ್ಯಾಯಾಧೀಶರ ಮುಂದೆ ಹಾಜರಾಗಿದ್ರು. ಕೊಲೆ ಪ್ರಕರಣದ ಆರೋಪಿಗಳು ಪ್ರತಿ ತಿಂಗಳು ಕೋರ್ಟ್ ಮುಂದೆ ಹಾಜರಾಗಬೇಕಿರೋ ಹಿನ್ನಲೆಯಲ್ಲಿ ಇಂದು ದರ್ಶನ್ ಹಾಜರಾಗಿದ್ರು.
ಕೋರ್ಟ್ ಗೆ ಬರುವ ಮುನ್ನ ರಾಜರಾಜೇಶ್ವರಿ ನಗರದ ತಮ್ಮ ಮನೆಯಲ್ಲಿ ದರ್ಶನ್ ತುಳಸಿ ಪೂಜೆ ನೆರವೇರಿಸಿದ್ರು. ಇನ್ನು ಪ್ರಕರಣದ ವಿಚಾರಣೆಯನ್ನು ಆಗಸ್ಟ್ 12ಕ್ಕೆ ಮುಂದೂಡಲಾಗಿದ್ದು, ಎಲ್ಲ ಆರೋಪಿಗಳ ಖುದ್ದು ಹಾಜರಿಗೆ ಕೋರ್ಟ್ ಸೂಚಿಸಿದೆ.


















