ಬೆಂಗಳೂರು: ನಟ ಅಜಯ್ ರಾವ್ ತಮ್ಮದೇ ಆದ ಫ್ಯಾನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಸಾಕಷ್ಟು ವರ್ಷಗಳ ಬಳಿಕ ಇದೀಗ ಯುದ್ಧಕಾಂಡ ಚಿತ್ರವನ್ನು ನಿರ್ಮಾಣ ಮಾಡಿ ನಟಿಸುತ್ತಿದ್ದಾರೆ. ಈಗ ಅವರು ತಮ್ಮ ಕೋಟಿ ಬೆಲೆಬಾಳುವ ಬಿಎಂಡಬ್ಲ್ಯೂ ಕಾರನ್ನು ನಟ ಅಜಯ್ ರಾವ್ ಅವರು ಮಾರಾಟ ಮಾಡಿದ್ದಾರೆ.
ನಟ ಅಜಯ್ ರಾವ್ ತನ್ನ ಸಿನಿಮಾಗಳಿಗಾಗಿ ದುಬಾರಿ ವೆಚ್ಚವನ್ನು ಖರ್ಚು ಮಾಡಿದ್ದು ಕೋಟಿ ಕೋಟಿ ಸಾಲವನ್ನು ಮಾಡಿಕೊಂಡಿದ್ದಾರೆ. ತನ್ನ ಲೈಫ್ ನಲ್ಲಿ ಸಾಲವೇ ಜಾಸ್ತಿಯಾಗಿದೆ ಎಂದು ನಟ ಅಜಯ್ ರಾವ್ ಇತ್ತೀಚೆಗೆ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ನಾನು ಮಾಡಿದಂತಹ ಸಾಲ ಬೇರೆ ಯಾರು ಕೂಡ ನಟರು ಮಾಡಿರಲಿಕ್ಕಿಲ್ಲ. ಅಷ್ಟೊಂದು ಸಾಲ ನಾನು ಮಾಡಿಕೊಂಡಿದ್ದೇನೆ ಎಂದು ನಟ ಅಜಯ್ ರಾವ್ ತಮ್ಮ ನೋವು ಹೇಳಿಕೊಂಡಿದ್ದರು ಹೀಗಾಗಿ ಕಾರು ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.

ನಟ ಅಜಯ್ ರಾವ್ ಪ್ರೀತಿಯ ಬಿಎಂಡಬ್ಲ್ಯೂ ಕಾರನ್ನು ಮಾರಾಟ ಮಾಡಿದ್ದಾರೆ. ಆದರೆ, ಈ ಅವರ ಮಗಳು ಚರಿಷ್ಮಾಳಿಗೆ ಬಹಳ ಅಚ್ಚುಮೆಚ್ಚು. ಹೀಗಾಗಿ ಖರೀದಿಸಿದವರು ತೆಗೆದುಕೊಂಡು ಹೋಗಲು ಬಂದಾಗ ಅಜಯ್ ರಾವ್ ಅವರ ಪುತ್ರಿ ಕಣ್ಣೀರು ಸುರಿಸಿದ್ದಾರೆ. ಈ ವಿಡಿಯೋ ನೋಡಿದವರು ಭಾವುಕರಾಗಿದ್ದಾರೆ.


















