ಧಾರವಾಡ : ಇತರೇ ಸಂಪನ್ಮೂಲಗಳಿಗಿಂತ ಇಂದು ರಾಷ್ಟ್ರದೆಲ್ಲೆಡೆ ಮಾನವ ಸಂಪನ್ಮೂಲದ ವಿಕಾಸಕ್ಕೆ ಆದ್ಯತೆ ಲಭಿಸುತ್ತಿದೆ. ದೇಶಕ್ಕೆ ಕ್ರಿಯಾಶೀಲ ಮಾನವ ಸಂಪನ್ಮೂಲದ ಅಗತ್ಯವಿದೆ ಎಂದು ಹಿರಿಯ ನ್ಯಾಯವಾದಿ ಅರುಣ ಚರಂತಿಮಠ ಹೇಳಿದರು.
ಅವರು ನಗರದ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯ ಸಂಸ್ಥಾಪಕರ ದಿನದಂದು ಹಮ್ಮಿಕೊಂಡಿದ್ದ ಹಿರಿಯ ಸಾಧಕರ ಗೌರವಾರ್ಪಣೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು. ಭಾರತವು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಲು ಶ್ರೇಷ್ಠ ಮಾನವ ಸಂಪನ್ಮೂಲದ ಅಗತ್ಯವಿದ್ದು, ಈ ನಿಟ್ಟಿನಲ್ಲಿ ತಮ್ಮ ಶಾಲೆಯು ಎಲ್ಲ ನೆಲೆಗಳಲ್ಲಿ ಗಮನಹರಿಸುತ್ತಿದೆ ಎಂದರು.
ಗೌರವ ಸಮರ್ಪಣೆ : ಮೂಲ ಧಾರವಾಡ ಭಾಗದ ಹಿರಿಯರಾದ ಶತಾಯುಷಿ ಬಿ. ಜಿ. ಪಾಟೀಲ, ಮಾಜಿ ಕಾರ್ಪೋರೇಟರ್ ವಿಜಯಾ ಲಿಂಬಣ್ಣದೇವರಮಠ, ಸಂಗಮೇಶ ಲಿಂಬಣ್ಣದೇವರಮಠ, ಭಾರತೀಯ ಸೇನೆಯ ವಿಶ್ರಾಂತ ಕರ್ನಲ್ ಡಾ. ಮೋಹನ ಮಠ, ಪಾಲಿಕೆಯ ಸದಸ್ಯರುಗಳಾದ ಶಂಕರ ಶೇಳಕೆ, ದೀಪಾ ನೀರಲಕಟ್ಟಿ, ಶಂಭುನಾಥ ಸಾಲಮನಿ, ಮಾಜಿ ಸದಸ್ಯ ಸಿ. ಎಸ್. ಪಾಟೀಲ, ಆನಂದ ಸಿಂಗನಾಥ, ಗ್ರಾ.ಪಂ. ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ, ರಂಗನಿರ್ದೇಶಕ ಡಾ.ಶಶಿಧರ ನರೇಂದ್ರ, ಲೇಖಕ ಗುರುಮೂರ್ತಿ ಯರಗಂಬಳಿಮಠ, ಪಕ್ಷಿತಜ್ಞ ಪ್ರಕಾಶ ಗೌಡರ, ವಿವಿಧ ಕ್ಷೇತ್ರಗಳ ಗಣ್ಯರುಗಳಾದ ಶಂಕರ ಬೆಟಗೇರಿ, ಗಂಗಾಧರ ಚೌಕಿಮಠ, ಆರ್. ಎಸ್. ಪಾಟೀಲ, ಎಸ್. ಎಸ್. ಲಕ್ಷ್ಮೇಶ್ವರ, ಬಿ.ಎಲ್. ಶಿವಳ್ಳಿ, ವೀರು ಸುತಗಟ್ಟಿಮಠ, ಬಸವರಾಜ ಕುರಟ್ಟಿಮಠ, ಜಗದೀಶ ಕಣ್ಣೆಗೌಡರ, ಮೊಹಿಯುದ್ದಿನ ಖಾನ ಲೋಹಾನಿ ಅವರನ್ನು ಸನ್ಮಾನಿಸಿ ಗೌರವ ಸಮರ್ಪಿಸಲಾಯಿತು.
ಶಾಲಾ ಆಡಳಿತ ಮಂಡಳಿಯ ಸುಜಾತಾ ಚರಂತಿಮಠ, ರವಿ ನಾಯಕ, ಭೈರವ ಚರಂತಿಮಠ, ಸಿ. ಪ್ರೇರಿತಾ, ಪಾಲಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ಸ್ವಾಗತಿಸಿದರು. ಪ್ರಿ. ಅಶ್ವಿನಿ ಚಿಕ್ಕಬಳ್ಳಾಪುರ ವಂದಿಸಿದರು.