ಬೆಂಗಳೂರು: ಬೆಂಗಳೂರಿನಲ್ಲಿ ಆಸಿಡ್ ರಾಜಕೀಯ ಶುರುವಾಗಿದೆ ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ. ಕಾಂಗ್ರೆಸ್ ಕಾರ್ಯಕರ್ತನೋರ್ವನ ಆಟೋಗೆ ಕಿಡಿಗೇಡಿಗಳು ಆಸಿಡ್ ಎರಚಿರುವ ಘಟನೆ ನಗರದ ನಂದಿನಿ ಲೇಔಟ್ ಬಳಿ ನಡೆದಿದೆ.
3 ದಿನಗಳ ಹಿಂದೆ ಕಾಂಗ್ರೆಸ್ ಕಾರ್ಯಕರ್ತ ಧನಂಜಯ್ ಎನ್ನುವವರ ಆಟೋಗೆ ದುಷ್ಕರ್ಮಿಗಳು ರಾತ್ರೋ ರಾತ್ರಿ ಬಂದು ಆಸಿಡ್ ಎರಚಿ ಹೋಗಿರುವ ದೃಶ್ಯ ಲಭ್ಯವಾಗಿದ್ದು, ಫಾರೆನ್ಸಿಕ್ ಪರೀಕ್ಷೆಯಲ್ಲಿ ಆಸಿಡ್ ಎಂಬುದು ಧೃಡವಾಗಿದೆ.
ಸ್ಥಳೀಯ ರಾಜಕೀಯ ನಾಯಕನ ಪ್ರಭಾವದಿಂದ ಆಸಿಡ್ ಎರಚಿರುವ ಆರೋಪ ಕೇಳಿಬರುತ್ತಿದ್ದು, ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.