ಚಿಕ್ಕಬಳ್ಳಾಪುರ : ಪ್ರೀತಿಸಲು ಒಪ್ಪಿಲ್ಲ ಎದು ಯುವತಿ ಮೇಲೆ ಕಿರಾತಕನೊಬ್ಬ ಆಸಿಡ್ ದಾಳಿ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ತಾಲ್ಲೂಕು ಮಂಚನಬಲೆ ಗ್ರಾಮದಲ್ಲಿ ನಡೆದಿದೆ.
ಪ್ರೀತಿಸುವಂತೆ ಯುವತಿಗೆ ಯುವಕ ತೀವ್ರ ಬಲತ್ಕಾರ ಮಾಡಿದ್ದಾನೆ. ಪ್ರೀತಿಗೆ ಒಪ್ಪದಿಗ್ಗರ್ರೆ ಸಿಟ್ಟಿಗೆದ್ದು ಆಸಿಡ್ ದಾಳಿ ಮಾಡಿದ್ದಾನೆ. ಆಸಿಡ್ ದಾಳಿಯಿಂದ ಸ್ವಲ್ಪದರಲ್ಲೇ ಯವತಿ ಪಾರಾಗಿದ್ದಾಳೆಂದು ತಿಳಿದು ಬಂದಿದೆ.
ಪ್ರೀತಿಸಿದ ಯುವತಿಯ ಮೇಲೆಯೆ ಆಸಿಡ್ ದಾಳಿ ಮಾಡಿರುವುದಕ್ಕೆ ಮನನೊಂದು ಸ್ವತಃ ಯುವಕ ಕೂಡ ಆಸೀಡ್ ದಾಳಿ ಮಾಡಿಕೊಂಡಿದ್ದು, ಸದ್ಯ ಯುವಕನನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಟಾಯ್ಲೆಟ್ ತೊಳೆಯುವ ಆಸಿಡ್ ನಿಂದ ದಾಳಿ ಮಾಡಿದ್ದು, ಸ್ಥಳಕ್ಕೆ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಕಲಾಗಿದೆ.



















