ಚಿತ್ರದುರ್ಗ: ಕಳ್ಳತನ ಮಾಡಿ 28 ವರ್ಷಗಳಿಂದ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಳಕಾಲ್ಮೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಮಾರುತಿ ಅಲಿಯಾಸ್ ಮನು ಮಾರುತಿ ಬಂಧಿತ ಆರೋಪಿಯಾಗಿದ್ದು, 1997 ರಲ್ಲಿ ನಡೆದಿದ್ದ ಕಳ್ಳತನ ಪ್ರಕರಣದಲ್ಲಿ ಈತ ಭಾಗಿಯಾಗಿದ್ದ. ಜೊತೆಗೆ ಇನ್ನು 9 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದ. ಮೊಳಕಾಲ್ಮೂರು JMFC ಕೋರ್ಟ್ ಸಮನ್ಸ್ ಜಾರಿ ಬಳಿಕ ಈತ ತಲೆ ಮರೆಸಿಕೊಂಡಿದ್ದ ಎನ್ನಲಾಗಿದೆ.

ಮಡಿಕೇರಿಯಲ್ಲಿ ಇದೀಗ DYSP ರಾಜಣ್ಣ ನೇತೃತ್ವದಲ್ಲಿ ಚಾಲಾಕಿ ಕಳ್ಳನನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಸ್ಪಿ ರಂಜಿತ್ ಕುಮಾರ್ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.