ಬೆಂಗಳೂರು: ವರ್ಧನ್ ಎಂಟರ್ಪ್ರೈಸ್‌ನ ಮಾಲೀಕ ಹಾಗೂ ಚಿತ್ರ ನಿರ್ಮಾಪಕ ಹರ್ಷವರ್ಧನ್ ಅವರು ತನ್ನ ಪತ್ನಿ, ನಟಿ ಚೈತ್ರಾ ಆರ್ ಅವರನ್ನು ಕಿಡ್ನ್ಯಾಪ್ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಹರ್ಷವರ್ಧನ್ ಹಾಗೂ ನಟಿ ಚೈತ್ರ ದಂಪತಿಗಳು ಪರಸ್ಪರ ಪ್ರೀತಿಸಿ ಮದ್ವೆಯಾಗಿದ್ದರು. ನಂತರ ಕೌಟುಂಬಿಕ ಕಲಹ ಹಿನ್ನಲೆ ಇಬ್ಬರೂ ದೂರವಾಗಿದ್ದರು. ಇವರಿಬ್ಬರಿಗೂ ಒಂದು ವರ್ಷದ ಹೆಣ್ಣು ಮಗುವಿತ್ತು. ಆದರೆ ಕೌಟುಂಬಿಕ ಕಲಹದಿಂದ ನಟಿ ಮಗಳ ಜೊತೆ ಬೆಂಗಳೂರಿಗೆ ಬಂದಿದ್ದಳು.

ಇದರಿಂದ ಬೇಸರಗೊಂಡಿದ್ದ ಪತಿ ಹರ್ಷವರ್ಧನ್, ತನ್ನ ಸ್ನೇಹಿತ ಕೌಶೀಕ್ ಮೂಲಕ ನಟಿ ಚೈತ್ರಾಗೆ 20 ಸಾವಿರ ಅಡ್ವಾನ್ಸ್ ನೀಡಿದ್ದ. ನಂತರ ಪಿಕ್ ಅಪ್ ನೆಪದಲ್ಲಿ ಮೈಸೂರು ರಸ್ತೆ ಮೂಲಕ ನೈಸ್ ರೋಡಲ್ಲಿ ಕಿಡ್ನ್ಯಾಪ್ ಮಾಡಿ, ಬಳಿಕ ಚೈತ್ರಾಳ ತಾಯಿಗೆ ಕರೆ ಮಾಡಿ ನಿನ್ನ ಮಗಳನ್ನು ಕಿಡ್ನ್ಯಾಪ್ ಮಾಡಿದ್ದೇನೆ. ನನ್ನ ಮಗಳನ್ನು ತಂದು ಒಪ್ಪಿಸಿದರೆ ನಿಮ್ಮ ಮಗಳನ್ನು ಸೇಫಾಗಿ ಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ಚೈತ್ರಾಳ ಸಹೋದರಿ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡ ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ದಾಖಲೆ ಚಳಿಗೆ ಬೆಂಗಳೂರು ಗಡಗಡ | 8 ವರ್ಷಗಳಲ್ಲಿ ಕನಿಷ್ಠ ತಾಪಮಾನ ದಾಖಲು!



















