ಚಿಕ್ಕಬಳ್ಳಾಪುರ : ಕಳ್ಳತನ ಮಾಡಿ ಎಸ್ಕೇಪ್ ಆಗುವ ವೇಳೆ ಭೀಕರ ಅಪಘಾತವಾಗಿ ಕಳ್ಳ ಸಾವನ್ನಪ್ಪಿದ್ದು, ಶಿಡ್ಲಘಟ್ಟ ತಾಲೂಕಿನ ಮಳಮಾಚನಹಳ್ಳಿ ಗ್ರಾಮದ ಬಳಿ ನಡೆದಿದೆ.
ಕಳ್ಳ ಸಿದ್ದೇಶ್ (೨೦) ಸಾವನ್ನಪ್ಪಿದ್ದಾನೆ. ಮಾರುತಿ 800 ಕಾರುನಲ್ಲಿ ಬಂದು ಹಾರಡಿ ಬಳಿ ಕಾರ್ಮಿಕರಿಗೆ ಚಾಕು ತೋರಿಸಿ ಬೆದರಿಸಿ ಮೊಬೈಲ್ ಕಸಿದುಕೊಂಡಿದ್ದ ಮೂವರು ಕಳ್ಳರು ಮೊಬೈಲ್ ಕದ್ದು ಪರಾರಿಯಾಗುವಾಗ ಕಾರು ಅಪಘಾತ ಸಂಭವಿಸಿದೆ.
ಮತ್ತೋರ್ವ ಕಳ್ಳನಾದ ವೈಶಾಖ್ ಅಲಿಯಾಸ್ ಶಿವಕುಮಾರ್ ಶಿಡ್ಲಘಟ್ಟ ಎಂಬಾತನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಶಿಡ್ಲಘಟ್ಟ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : SIT ತನಿಖೆಯಲ್ಲಿ ಬುರುಡೆ ಟೀಂ ಪಿತೂರಿ ಬಯಲು | ಧರ್ಮಸ್ಥಳಕ್ಕೆ ಕಳಂಕ ಮೆತ್ತಲು ಬಂದವರೇ ಬೆತ್ತಲಾದ್ರಾ?



















