ವಿಜಯಪುರ: ಗಣೇಶ ವಿಸರ್ಜನೆ ವೇಳೆ ವಿದ್ಯುತ್ ತಂತಿ ತಗುಲಿ ಯುವಕ ಸಾವನ್ನಪ್ಪಿರುವ ಧಾರುಣ ಘಟನೆ ವಿಜಯಪುರ ನಗರದ ಗಾಂಧಿಚೌಕ್ ವೃತ್ತದ ಬಳಿ ನಡೆದಿದೆ.
ಏಳನೇ ದಿನದ ಗಣೇಶ ವಿಸರ್ಜನೆ ವೇಳೆ ಗಣೇಶನ ಮೂರ್ತಿ ಸಾಗಲು ಕೋಲಿನಿಂದ ವಿದ್ಯುತ್ ತಂತಿ ಎತ್ತುವ ವೇಳೆ ಕರೆಂಟ್ ಪ್ರವಹಿಸಿದೆ, ಈ ವೇಳೆ ವಿದ್ಯುತ್ ಶಾಕ್ ಗೆ ಡೋಬಲೆಗಲ್ಲಿ ನಿವಾಸಿ ಶುಭಂ ಸಂಕಳ (21) ಬಲಿಯಾಗಿದ್ದಾನೆ.
ಸ್ಥಳಕ್ಕೆ ಗಾಂಧಿಚೌಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿ ಘಟನೆ ನಡೆದಿದೆ.