ಬೆಂಗಳೂರು : ಅಗರ ಮೆಟ್ರೋ ಕಾಮಗಾರಿ ವೇಳೆ ಆಯತಪ್ಪಿ ಬೃಹತ್ ಕ್ರೇನ್ ಬಿದ್ದಿರುವ ಘಟನೆ ಔಟರ್ ರಿಂಗ್ ರೋಡ್ ಸಂಪರ್ಕ ಕಲ್ಪಿಸುವ ವೇಳೆ ನಡೆದಿದೆ.
ಮೆಟ್ರೋ ನೀಲಿ ಮಾರ್ಗದ ಕಾಮಗಾರಿ ವೇಳೆ ಇಂದು ಮುಂಜಾನೆ ಕ್ರೇನ್ ಉರುಳಿ ಬಿದ್ದಿದೆ. ಅದೃಷ್ಟಾವಶಾತ್ ಘಟನೆಯಲ್ಲಿ ಯಾವುದೇ ಸಾವು- ನೋವು ಸಂಭವಿಸಿಲ್ಲ. ಬಿದ್ದಿರುವ ಕ್ರೇನ್ ಎತ್ತಲು ಸಿಬ್ಬಂದಿಗಳು ಹರ ಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ : ಕಾರು-ಕೆಎಸ್‌ಆರ್‌ಟಿಸಿ ಬಸ್ ನಡುವೆ ಡಿಕ್ಕಿ | ಮೂವರು ಸಾವು



















