ಪ್ಯಾನ್ ಇಂಡಿಯಾದ ಬಹುನಿರೀಕ್ಷಿತ ಸಿನಿಮಾ ಕೂಲಿ ಚಿತ್ರತಂಡ ಇದೀಗ ಕ್ಯಾರೆಕ್ಟರ್ ಲುಕ್ ರಿಲೀಸ್ ಮಾಡಿದೆ. ಸೂಪರ್ ಸ್ಟಾರ್ ರಜನಿಕಾಂತ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಕೂಲಿ ಸಿನಿಮಾದಲ್ಲಿ ಮಲ್ಟಿಸ್ಟಾರ್ಸ್ ಕಾಣಿಸಿಕೊಳ್ಳಲಿದ್ದಾರೆ.
ಈಗಾಗಲೇ ಬಹಳ ನಿರೀಕ್ಷೆ ಹುಟ್ಟಿಸಿರುವ ಕೂಲಿ ಸಿನಿಮಾದಲ್ಲಿ ಅಮಿರ್ ಖಾನ್ ಕ್ಯಾರೆಕ್ಟರ್ ಲುಕ್ ರಿವೀಲ್ ಮಾಡಲಾಗಿದೆ. ಈ ಪೋಸ್ಟರ್ ನಲ್ಲಿ ಒರಟಾದ, ಪೈಪ್-ಸ್ಮೋಕಿಂಗ್ ಅವತಾರದಲ್ಲಿ ಅಮೀರ್ ಖಾನ್ ಲುಕ್ ವೈರಲ್ ಆಗುತ್ತಿದೆ. ಕೂಲಿಯಲ್ಲಿ ವಿಶೇಷ ಅತಿಥಿ ಪಾತ್ರದಲ್ಲಿ ಅಭಿಮಾನಿಗಳನ್ನು ಅಚ್ಚರಿಗೊಳಿಸಲು ಅಮೀರ್ ಖಾನ್ ಸಜ್ಜಾಗಿದ್ದು, ದಹಾ ಎನ್ನುವ ಪಾತ್ರದ ಮೂಲಕ ತನ್ನ ಫ್ಯಾನ್ಸ್ ಗಳಿಗೆ ಸಿಹಿ ಸುದ್ದಿ ನೀಡಲಿದ್ದಾರೆ.
ತನ್ನ ಪಾತ್ರದ ಬಗ್ಗೆ ಮಾತನಾಡಿದ ಅಮೀರ್ ಖಾನ್, ನಾನು ರಜನಿ ಸರ್ ಅವರ ದೊಡ್ಡ ಅಭಿಮಾನಿ. ನನಗೆ ರಜನಿ ಬಗ್ಗೆ ತುಂಬಾ ಪ್ರೀತಿ ಹಾಗೂ ಗೌರವವಿದೆ. ಹಾಗಾಗಿ, ನಾನು ಸ್ಕ್ರಿಪ್ಟ್ ನ್ನು ಕೇಳದೆ ಸಿನಿಮಾ ಒಪ್ಪಿಕೊಂಡೆ ಎಂದಿದ್ದಾರೆ.
ಲೋಕೇಶ್ ಕನಕರಾಜ್ ನಿರ್ದೇಶನ ಹಾಗೂ ಸನ್ ಪಿಕ್ಚರ್ಸ್ ನಿರ್ಮಿಸಿದ ‘ಕೂಲಿ’ ತಮಿಳು ಭಾಷೆಯ ಆಕ್ಷನ್ ಥ್ರಿಲ್ಲರ್ ಸಿನಿಮಾ ಆಗಿದ್ದು, ಮಲ್ಟಿಸ್ಟಾರ್ಸ್ ಈ ಸಿನಿಮಾದಲ್ಲಿ ನಟಿಸಿದ್ದು, ಆಗಸ್ಟ್ 14 ರಂದು ಕೂಲಿ ಚಿತ್ರ ರಿಲೀಸ್ ಆಗಲಿದೆ.