ಬೆಂಗಳೂರು: ಸ್ವಂತ ಜಮೀನು ಹೊಂದಿರುವವರು ಪಹಣಿಗಳಿಗೆ(RTC) ಆಧಾರ್ ಸೀಡಿಂಗ್ ಅಥವಾ ಲಿಂಕ್ ಮಾಡುವುದನ್ನು ಕಂದಾಯ ಇಲಾಖೆಯು ಕಡ್ಡಾಯಗೊಳಿಸಿದೆ. ಹಾಗಾಗಿ, ರಾಜ್ಯದ ರೈತರು ತಮ್ಮ ಜಮೀನಿನ ಪಹಣಿಗೆ ಆನ್ ಲೈನ್ ಮೂಲಕವೇ ಆಧಾರ್ ಲಿಂಕ್ ಮಾಡಬಹುದಾಗಿದೆ. ಹೇಗೆ ಮಾಡಬೇಕು? ಇದರ ಮಹತ್ವ ಏನು ಎಂಬುದರ ಮಾಹಿತಿಯನ್ನು ನಾವು ನಿಮಗೆ ನೀಡುತ್ತಿದ್ದೇವೆ.
ಕಂದಾಯ ಇಲಾಖೆಯು ಜಮೀನಿನ ದಾಖಲೆಗಳ ಡಿಜಿಟಲೀಕರಣ ಮಾಡುತ್ತಿದ್ದು ನಕಲಿ ಮಾಲೀಕತ್ವದ ವಂಚನೆಗಳನ್ನು ತಡೆಗಟ್ಟಲು ಈ ಕ್ರಮವನ್ನು ಜಾರಿಗೆ ತಂದಿದೆ. ಆಧಾರ್ ಲಿಂಕ್ ಮಾಡುವುದರಿಂದಜಮೀನಿನ ಮಾಲೀಕತ್ವದ ಬದಲಾವಣೆಗಳು ನೇರವಾಗಿ ರೈತರ ಮೊಬೈಲ್ ಗೆ ಎಸ್ ಎಂ ಎಸ್ ಮೂಲಕ ತಲುಪುತ್ತದೆ. ಜಮೀನಿನ ದಾಖಲೆಗಳು ಕೂಡ ಸುರಕ್ಷಿತವಾಗಿರುತ್ತವೆ. ಹಾಗೆಯೇ, ಆನ್ ಲೈನ್ ನಲ್ಲಿ ಯಾವುದೇ ಸೇವೆ ಪಡೆಯಲು ಆಧಾರ್ ಲಿಂಕ್ ಅಗತ್ಯವಾಗಿದೆ.
ಹಾಗಾಗಿ, ಆಧಾರ್ ಲಿಂಕ್ ಮಾಡಲು ಜಮೀನಿನ ಸರ್ವೆ ನಂಬರ್, ಆಧಾರ್ ಕಾರ್ಡ್ ಪ್ರತಿ, ನೋಂದಣಿ ಮಾಡಲಾದ ಮೊಬೈಲ್ ನಂಬರ್, ಜಮೀನಿನ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಗ್ರಾಮದ ಗ್ರಾಮ ಚಾವಡಿ/ತಾಲೂಕು ಕಂದಾಯ ಕಚೇರಿಗೆ ಭೇಟಿ ನೀಡಿ ಲಿಂಕ್ ಮಾಡಿಸಬೇಕು.
ಲಿಂಕ್ ಮಾಡುವುದು ಏಕೆ ಮುಖ್ಯ?
ಜಮೀನಿನ ಮಾಲೀಕತ್ವದ ಬದಲಾವಣೆಗಳ ಬಗ್ಗೆ ತಿಳಿಯಲು ತೊಂದರೆಯಾಗುವ ಕಾರಣ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಸರ್ಕಾರದ ಯೋಜನೆಗಳ ಲಾಭ ಪಡೆಯಲು ಅಂದರೆ, ಬೆಂಗಳೂರು ಗ್ರಾಮೀಣ ವಿಕಾಸ ಯೋಜನೆ, ಕೃಷಿ ಸಬ್ಸಿಡಿ ಪಡೆಯಲು ತೊಂದರೆಯಾಗುತ್ತದೆ. ಭವಿಷ್ಯದಲ್ಲಿ ಆನ್ ಲೈನ್ ಸೇವೆಗಳು ಅಂದರೆ, ಜಮೀನು ದಾಖಲೆ, ಖಾತೆ ನಕಲು ಪಡೆಯಲು ಸಾಧ್ಯವಾಗದೇ ಇರಬಹುದು.