ಬೆಂಗಳೂರು: ರ‍್ಯಾಪಿಡೋ ಬೈಕ್‌ನಲ್ಲಿ ಹೆಲ್ಮೆಟ್ ಧರಿಸದೇ, ಕೈಯಲ್ಲಿ ಎಣ್ಣೆ ಬಾಟಲ್ ಹಿಡಿದು ಯುವತಿಯೊಬ್ಬಳು ಹುಚ್ಚಾಟ ಮೆರೆದಿರುವ ಘಟನೆ ಬೆಂಗಳೂರಿನ ಬನಶಂಕರಿಯಲ್ಲಿ ನಡೆದಿದೆ.
ಯುವತಿ ರ‍್ಯಾಪಿಡೋ ಬೈಕ್‌ನಲ್ಲಿ ಬನಶಂಕರಿ ಕಡೆಯಿಂದ ಬಿಟಿಎಂ ಕಡೆ ಹೊರಟಿದ್ದಳು. ಈ ವೇಳೆ ಹಿಂಬದಿಯಲ್ಲಿ ಕುಳಿತು ಸಿನಿಮೀಯ ಸ್ಟೈಲ್‌ನಲ್ಲಿ ಎಣ್ಣೆ ಬಾಟಲ್ ಹಿಡಿದು ಎಂಜಾಯ್ ಮಾಡಿದ್ದು, ಜಾಲಿ ಮೂಡ್‌ನಲ್ಲಿ ತೇಲಾಡಿದ್ದಾಳೆ.
ಸುಮಾರು ನಾಲ್ಕೈದು ಕಿ.ಮೀ ಇದೇ ರೀತಿ ಮಾಡಿದ್ದು, ಎಣ್ಣೆ ಏಟಲ್ಲಿ ಬೈಕ್‌ನಲ್ಲಿ ತೂರಾಡಿಕೊಂಡು ಹೋಗಿದ್ದಾಳೆ. ಹಿಂದೆ ಕಾರಿನಲ್ಲಿ ಬರುತ್ತಿದ್ದ ಯುವಕರ ಗುಂಪೊಂದು ಯುವತಿ ವಿಡಿಯೋ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಭಾರೀ ವೈರಲ್ ಆಗಿದೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಲವ್ ಜಿಹಾದ್ ಗಲಾಟೆ – ಜಿಮ್ ಟ್ರೈನರ್ ವಿರುದ್ಧ ಹಿಂದೂ ಸಂಘಟನೆಗಳ ಆಕ್ರೋಶ



















