ಬೆಂಗಳೂರು: ಹಾಸ್ಟೆಲ್ ನಲ್ಲಿದ್ದ ಯುವತಿ ಆತ್ಮಹತ್ಯೆ (suicied)ಮಾಡಿಕೊಂಡಿದ್ದ ಘಟನೆ ಸೋಮವಾರ ನಗರದಲ್ಲಿ ಬೆಳಕಿಗೆ ಬಂದಿತ್ತು. ಈಗ ಯುವತಿಯ ಸ್ನೇಹಿತ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ.
ಪಾವನ(pavana) ಆತ್ಮಹತ್ಯೆ ಮಾಡಿಕೊಂಡಿದ್ದ ಯುವತಿಯಾಗಿದ್ದಳು. ಪಾವನಳ ಸ್ನೇಹಿತ ವಿಜಯ್(vijay) ಎಂಬಾತ ಕೂಡ ಸೋಮವಾರ ರಾತ್ರಿ 9.30ರ ಸುಮಾರಿಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕೂಡಲೇ ಆತನನ್ನು ನಾಗರಬಾವಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸದ್ಯ ಆತನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ. ಆತನು ಕೂಡ ಹಾಸ್ಟೆಲ್(hostel) ನಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ವಿಜಯ್ ಕೋಲಾರ ಮೂಲದವನು. ವಿಜಯ್ ಹಾಗೂ ಪಾವನ ಇಬ್ಬರೂ ಒಂದೇ ಕ್ಲಾಸ್ ನಲ್ಲಿ ಓದುತ್ತಿದ್ದರು. ಪಾವನಗೆ ವಿಜಯ್ ಮೇಲೆ ಪ್ರೀತಿ (love)ಇತ್ತು. ಆದರೆ, ವಿಜಯ್ ಪಾವನಳ ಪ್ರೀತಿಯನ್ನು ನಿರಾಕರಿಸಿದ್ದ.
ಹೀಗಾಗಿ ಇದರಿಂದ ಬೇಸರಗೊಂಡಿದ್ದ ಪಾವನ ಸೋಮವಾರ ಮಧ್ಯಾಹ್ನ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ಪಾವನ ಪ್ರೀತಿ ನಿರಾಕರಿಸಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರಿಂದಾಗಿ ಕೇಸ್ ದಾಖಲಾಗುತ್ತದೆ. ಪೊಲೀಸರು(police) ವಿಚಾರಣೆ ನಡೆಸುತ್ತಾರೆಂದು ಹೆದರಿದ ವಿಜಯ್, ಸೋಮವಾರ ರಾತ್ರಿ ಹಾಸ್ಟೆಲ್ ನಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎನ್ನಲಾಗಿದೆ. ಸದ್ಯ ವಿಜಯ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.