ರೈಲು ಹತ್ತುವ ಸಂದರ್ಭದಲ್ಲಿ ಸ್ಲಿಪ್ ಆಗಿ ಬಿದ್ದು ಯುವತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ಬುಧವಾರ ಸಂಜೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಮೈಸೂರು ಮೂಲದ 19 ವರ್ಷದ ಶ್ರೇಯಾ ಸಾವನ್ನಪ್ಪಿರುವ ಯುವತಿ. ಶ್ರೇಯಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕಾಗಿ ಚೆನ್ನೈಗೆ ತೆರಳುತ್ತಿದ್ದರು. ಸ್ನೇಹ 15 ಜನರ ತಂಡದೊಂದಿಗೆ ತೆರಳುತ್ತಿದ್ದಳು. ಸ್ನೇಹಿತರು ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ ಹಣ್ಣು ಖರೀದಿಸುವುದಕ್ಕಾಗಿ ಕೆಳಗೆ ಇಳಿದಿದ್ದರು. ನಂತರ ಟ್ರೈನ್ ಮೂವ್ ಆಗಿದೆ. ಆಗ ಯುವತಿ ಅವಸರದಲ್ಲಿ ಹತ್ತಲು ಮುಂದಾಗಿದ್ದಾಳೆ.
ಈ ವೇಳೆ ಸ್ಲಿಪ್ ಆಗಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾಳೆ. ಕೂಡಲೇ ಯುವತಿಯನ್ನು ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಈ ಕುರಿತು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.