ಬೆಂಗಳೂರು : ಬೆಂಗಳೂರಲ್ಲಿ ಇಬ್ಬರು ಯುವತಿಯರ ಜೊತೆ ವಾಸವಾಗಿದ್ದ ಯುವಕ ದುರಂತ ಅಂತ್ಯಕಂಡಿದ್ದಾನೆ.ಕೇರಳದ ಶ್ರೀಕಾರ್ಯಂ ಮೂಲದ 39 ವರ್ಷದ ವಿಷ್ಣು ಮೃತ ದುರ್ದೈವಿ. 38 ವರ್ಷದ ಸೂರ್ಯ ಕುಮಾರಿ ಹಾಗೂ 28 ವರ್ಷದ ಜ್ಯೋತಿ ಎಂಬ ಇಬ್ಬರು ಯುವತಿಯರು ವಿಷ್ಣು ಜೊತೆ ಒಂದೇ ಫ್ಲ್ಯಾಟ್‌ನಲ್ಲಿ ವಾಸವಿದ್ದವರು.
ಕೆಲಸದ ಕಾರಣದಿಂದ ಕೆಳೆದ ಕೆಲ ವರ್ಷಗಳಿಂದ ಯುವಕ ಹಾಗೂ ಇಬ್ಬರು ಯುವತಿಯರು ಬೆಂಗಳೂರಿನ ಯಲ್ಲನೇಹಳ್ಳಿಯ ಫ್ಲ್ಯಾಟ್‌ನಲ್ಲಿ ವಾಸವಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು, ಮೂಲತಃ ಕೇರಳದ ತಿರುವನಂತಪುರಂದವರು. ಹೀಗಾಗಿ ಬೆಂಗಳೂರಿನಲ್ಲಿ ಜೊತೆಯಾಗಿ ಒಂದೇ ಫ್ಲ್ಯಾಟ್‌ನಲ್ಲಿ ವಾಸವಿದ್ದರು.
ಈ ಪೈಕಿ ಒಬ್ಬಳ ಜೊತೆ ಪ್ರೀತಿಯಲ್ಲಿ ಬಿದ್ದಿದ್ದೆ, ಮೂವರ ಜಗಳಕ್ಕೆ ಕಾರಣವಾಗಿದೆ ಎಂಬ ಆರೋಪ ಕೇಳಿಬಂದಿದೆ. ಪರಿಣಾಮ ಇಬ್ಬರು ಯುವತಿರ ಕಿರುಕುಳ ಹೆಚ್ಚಾಗಿ, ಯುವಕ ದುರಂತ ಅಂತ್ಯಕಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಇಬ್ಬರು ಯುುವತಿಯರ ವಿರುದ್ದ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ.
ಸದ್ಯ ಬೆಂಗಳೂರಿನಲ್ಲಿ ವಾಸವಾಗಿರುವ ಸೂರ್ಯ ಕುಮಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲೀಸರು ಮುಂದಾಗಿದ್ದಾರೆ. ಇತ್ತ ಜ್ಯೂತಿ ಕೆಲಸದ ನಿಮಿತ್ತ ಡೆಹ್ರಡೂನ್‌ಗೆ ತೆರಳಿರುವ ಮಾಹಿತಿ ಸಿಕ್ಕಿದೆ. ಆದರೆ ಜ್ಯೋತಿ ಫೋನ್ ಸ್ವಿಚ್ ಆಫ್ ಆಗಿದೆ. ಹೆಚ್ಚಿನ ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಬಿಹಾರ ಎಕ್ಸಿಟ್ ಪೋಲ್ ರಿಸಲ್ಟ್ ಔಟ್ | ಯಾರಿಗೆ ಎಷ್ಟು ಸ್ಥಾನ? ಇಲ್ಲಿದೆ ಮಾಹಿತಿ



















