ಹಾವೇರಿ: ಯುವಕನೊಬಬ್ ಆಕಳು (Cow) ಮೈ ತೊಳೆಯಲು ಹೋಗಿ ನದಿಯ ಪಾಲಾಗಿರುವ ಘಟನೆ ನಡೆದಿದೆ.
ಯುವಕನೋರ್ವ ವರದಾ ನದಿಯಲ್ಲಿ (River) ನೀರು ಪಾಲಾದ ಘಟನೆ ಹಾವೇರಿ (Haveri) ತಾಲೂಕಿನ ಹಂದಿಗನೂರು (Handiganur) ಗ್ರಾಮದಲ್ಲಿ ನಡೆದಿದೆ. ನೀರು ಪಾಲಾದ ಯುವಕನನ್ನು ಗಾಳೆಪ್ಪ ಮೇಲಿನಮನಿ (24) ಎಂದು ಗುರುತಿಸಲಾಗಿದೆ. ಗಾಳೆಪ್ಪ ಆಕಳು ಮೇಯಿಸಿಕೊಂಡು ನಂತರ ಆಕಳಿನ ಮೈ ತೊಳೆಯುವುದಕ್ಕಾಗಿ ನದಿಗೆ ಇಳಿದಿದ್ದ. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನೀರು ಪಾಲಾಗಿದ್ದಾನೆ. ಕೂಡಲೇ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿದ್ದಾರೆ.
ನೀರಲ್ಲಿ ನಾಪತ್ತೆಯಾಗಿರುವ ಗಾಳೆಪ್ಪನಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಸ್ಥಳದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಕುರಿತು ಹಾವೇರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.