ಬೆಂಗಳೂರು ಗ್ರಾಮಾಂತರ: ಯುವಕನೊಬ್ಬ ಚಲಿಸುತ್ತಿದ್ದ ಕಾರಿನಿಂದ ಏಕಾಏಕಿಯಾಗಿ ಕೆಳಗೆ ಬಿದ್ದಿರುವ ವಿಚಿತ್ರ ಘಟನೆಯೊಂದು ನಡೆದಿದೆ.
ಆದರೆ, ಆತನೊಂದಿಗೆ ಕಾರಿನಲ್ಲಿದ್ದ ಯುವತಿ ಮಾತ್ರ ದೆವ್ವ ಹಿಡಿದಿದ್ದರಿಂದ ಆತ ಕೆಳಗೆ ಬಿದ್ದಿದ್ದಾನೆ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾಳೆ.
ಇದು ಸಾಕಷ್ಟು ವೈರಲ್ ಆಗುತ್ತಿದೆ. ಯುವತಿ ಜೊತೆ ಕಾರಿನಲ್ಲಿ ಬರುವಾಗ ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ಕಾರಿನ ಡೋರ್ ತೆಗೆದು ಯುವಕ ಕೆಳಗೆ ಬಿದ್ದಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ(Nelamangala) ತಾಲೂಕಿನ ಜಾಸ್ ಟೋಲ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಇಸ್ಲಾಂಪುರದ ಸುಫಿಯಾನ್(20)ಕೆಳಗೆ ಬಿದ್ದ ಯುವಕ. ಸಧ್ಯ ಕೆಳಗೆ ಬಿದ್ದಿದ್ದರಿಂದ ಆತನಿಗೆ ಗಾಯಗಳಾಗಿವೆ. ಹೀಗಾಗಿ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆತನೊಂದಿಗೆ ಕಾರಿನಲ್ಲಿ ತೆರಳಿದ್ದ ಯುವತಿ ಅನಿಷಾ, ಫಿಯಾನ್ ನನ್ನ ಪಕ್ಕದಲ್ಲಿಯೇ ಕೂತಿದ್ದ. ದೆವ್ವ ಹಿಡಿದು ಆತ ಕೆಳಗೆ ಬಿದ್ದಿದ್ದಾನೆ ಎಂದು ಹೇಳಿದ್ದಾರೆ.