ಬೆಂಗಳೂರು: ಪೊಲೀಸರ ಮೇಲಿನ ಕೋಪಕ್ಕೆ ಯುವಕನೊಬ್ಬ ಬೈಕ್ ಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ವಿಧಾನಸೌಧದ ಎದುರೇ ಎಲೆಕ್ಟ್ರಿಕ್ ಬೈಕ್(Bike)ಗೆ ಮಾಲೀಕನೇ ಬೆಂಕಿ ಹಚ್ಚಿದ್ದಾರೆ. ದಂಡದ ಬಾಕಿ ಹಣ ಪಾವತಿಸಲು ಆಗದಿದ್ದಕ್ಕೆ ಬೆಂಕಿ ಹಚ್ಚಿರಬಹುದು ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಯುವಕನ ತಾಯಿಯಯನ್ನು ಪೊಲೀಸರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕೆ ವಿಧಾನಸೌಧದ ಎದುರೇ ಬೈಕ್ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾನೆ ಎಂದು ತಿಳಿದು ಬಂದಿದೆ.
ಚಳ್ಳಕೆರೆ ಮೂಲದ ಪೃತ್ವಿರಾಜ್ ಎಂಬ ಯುವಕ ಟ್ರಕ್ಕಿಂಗ್ ಹೋಗಿ ಮಿಸ್ಸಾಗಿದ್ದ. ಹೀಗಾಗಿ ಗಾಬರಿಗೊಂಡ ಆತನ ತಾಯಿ ಚಳ್ಳಕೆರೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದಾಗ ಪೊಲೀಸರು ಪೃಥ್ವಿಯ ತಾಯಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ತನ್ನ ತಾಯಿಯಿನ್ನು ಬೈದಿದ್ದಕ್ಕೆ ಬೇಸರಗೊಂಡ ಪೃಥ್ವಿರಾಜ್ ವಿಧಾನಸೌಧದ ಮುಂದೆಯೇ ಬೈಕ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾನೆ ಎನ್ನಲಾಗಿದೆ.