ಬೆಂಗಳೂರು : ಬೆಂಗಳೂರಿನ ಮಡಿವಾಳದಲ್ಲಿರುವ ಲಾಡ್ಜ್ ಒಂದರಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಪುತ್ತೂರು ಮೂಲದ ತಕ್ಷಿತ್ (20) ಮೃತ ಯುವಕನಾಗಿದ್ದು, ಈತ ಯುವತಿ ಜೊತೆ ಲಾಡ್ಜ್ನಲ್ಲಿದ್ದ ತಂಗಿದ್ದ ಎನ್ನಲಾಗಿದೆ. 8 ದಿನಗಳ ಹಿಂದೆಯೇ ಈತ ಬೆಂಗಳೂರಿಗೆ ಬಂದಿದ್ದು, ಯುವತಿ ಜೊತೆ ರೂಮ್ನಲ್ಲಿ ಉಳಿದುಕೊಂಡಿದ್ದ ಎಂದು ತಿಳಿದುಬಂದಿದೆ.
ತಕ್ಷಿತ್ ಮೈಸೂರಿನಲ್ಲಿ ಓದೋಕೆ ಹೋಗ್ತೀನಿ ಎಂದು ವಿರಾಜಪೇಟೆಯ ಯುವತಿ ಜೊತೆ ಬೆಂಗಳೂರಿಗೆ ಬಂದಿದ್ದು, ಮಡಿವಾಳದ ಲಾಡ್ಜ್ನಲ್ಲಿ ಅಕ್ಟೋಬರ್ 9ರಂದು ರೂಮ್ ಬುಕ್ ಮಾಡಿದ್ದ. 8 ದಿನಗಳ ಕಾಲ ಇಬ್ಬರು ಕೂಡ ಲಾಡ್ಜ್ನಲ್ಲೇ ಇದ್ದರು. ಆದ್ರೆ ಅಕ್ಟೋಬರ್ 17ರ ರಾತ್ರಿ ತಕ್ಷಿತ್ ಶವವಾಗಿ ಪತ್ತೆಯಾಗಿದ್ದಾನೆ. ಸದ್ಯ ಯುವಕ ತಕ್ಷಿತ್ ಸಾವಿನ ಸುತ್ತ ಅನುಮಾನದ ಹುತ್ತ ಹುಟ್ಟುಕೊಂಡಿದೆ. ತಕ್ಷಿತ್ ಹಾಗೂ ಯುವತಿ ಪಣಂಬೂರಿನ ಒಂದೇ ಕಾಲೇಜಿನಲ್ಲಿ ವ್ಯಾಸಂಗ ಮಾಡ್ತಿದ್ದರು ಎನ್ನಲಾಗಿದೆ.
ಇನ್ನು ಪುಡ್ ಡೆಲಿವರಿ ಬಾಯ್ನಿಂದ ಹೊಟೇಲ್ ರೂಮ್‌ಗೆ ಊಟ ತರಿಸಿಕೊಂಡಿದ್ದ ಜೋಡಿಗೆ ಊಟ ತಿಂದ ಬಳಿಕ ಫುಡ್ ಪಾಯ್ಸನ್ ಆಗಿತ್ತಂತೆ. ಬಳಿಕ ಇಬ್ಬರು ಪಕ್ಕದ ಮೆಡಿಕಲ್ ಶಾಪ್ಗೆ ಹೋಗಿ ಮಾತ್ರೆ ತಂದಿದ್ದಾರೆ. ಸ್ಪಲ್ಪ ಚೇತರಿಕೆ ಕಂಡ ಬಳಿಕ ಯುವತಿಯೇ ರೂಮ್ ಖಾಲಿ ಮಾಡಿದ್ದಾಳೆ ಎನ್ನಲಾಗಿದೆ.
ರೂಮ್ನಲ್ಲೇ ಇದ್ದ ತಕ್ಷಿತ್ ಮಲಗಿದ್ದಲ್ಲೇ ಶವವಾಗಿ ಪತ್ತೆಯಾಗಿದ್ದಾನೆ. ನಿನ್ನೆ ತಡರಾತ್ರಿ ಸಿಬ್ಬಂದಿ ರೂಮಿನ ಬಾಗಿಲು ತಟ್ಟಿದ್ದಾನೆ. ಆದ್ರೆ, ತಕ್ಷಿತ್ನ ರೂಮಿಂದ ಯಾವುದೇ ರೆಸ್ಫಾನ್ಸ್ ಬಂದಿಲ್ಲ. ಬಳಿಕ ಮಾಸ್ಟರ್ ಕೀ ಬಳಸಿ ರೂಂ ಬಾಗಿಲು ತೆರೆದಾಗ ಬೆಡ್ ಮೇಲೆ ತಕ್ಷಿತ್ ಮೃತದೇಹ ಪತ್ತೆಯಾಗಿದೆ. ತಕ್ಷಣ ಸಿಬ್ಬಂದಿ ಮಡಿವಾಳ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಲಾಡ್ಜ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯುಡಿಆರ್ ಪ್ರಕರಣ ದಾಖಲಾಗಿದ್ದು. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗ್ತಿದೆ.
ಗುರುವಾರ ಮಧ್ಯಾಹ್ನ ಯುವತಿ ಚೆಕ್ ಔಟ್ ಆಗಿದ್ದಾಳೆ. ನಿನ್ನೆ ರಾತ್ರಿ ರೂಮ್ನಲ್ಲಿ ಯುವಕ ಶವವಾಗಿ ಪತ್ತೆಯಾಗಿದ್ದಾನೆ. ಸದ್ಯ ಲಾಡ್ಜ್ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಮರಣೋತ್ತರ ಪರೀಕ್ಷೆ ಬಳಿಕ ಯುವಕನ ಸಾವಿನ ನಿಖರ ಕಾರಣ ತಿಳಿಯಲಿದೆ.