ಬೆಂಗಳೂರು: ಬುರ್ಖಾ ಧರಿಸಿ ಯುವಕನೊಬ್ಬ ಯುವತಿಯರ ಹಾಸ್ಟೆಲ್ ಗೆ ನುಗ್ಗಿ ಈಗ ಪೊಲೀಸರ ಅತಿಥಿಯಾಗಿರುವ ಘಟನೆ ನಡೆದಿದೆ.
ಇಲ್ಲಿನ (Bengaluru) ಜ್ಞಾನಭಾರತಿ ಕಾಲೇಜು (Gnana Bhrathi College) ಆವರಣದಲ್ಲಿ ಈ ಘಟನೆ ನಡೆದಿದೆ. ಜ್ಞಾನಭಾರತಿ ಕಾಲೇಜಿನ ರಮಾಬಾಯಿ ಹಾಸ್ಟೆಲ್‌ಗೆ ಗುರುವಾರ ರಾತ್ರಿ 9 ಗಂಟೆಯ ವೇಳೆ ಆತ ನುಗ್ಗಿದ್ದಾನೆ ಎನ್ನಲಾಗಿದೆ.
ಆತ ಬುರ್ಖಾ ಧರಿಸಿ ಹಾಸ್ಟೆಲ್ ಗೆ ನುಗ್ಗಿದ್ದನ್ನು ಹಲವು ವಿದ್ಯಾರ್ಥಿನಿಯರು ಗಮನಿಸಿದ್ದಾರೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕ ಪೊಲೀಸರು ಆಗಮಿಸಿ, ಆತನನ್ನು ವಶಕ್ಕೆ ಪಡೆದಿದ್ದಾರೆ. ಆದರೆ, ಈತ ಹಾಸ್ಟೆಲ್ ಗೆ ನುಗ್ಗಲು ಯುವತಿಯೋರ್ವಳು ಕಾರಣ ಎನ್ನಲಾಗಿದೆ. ಆತನ ಸ್ನೇಹಿತಿಯಿಂದಲೇ ಆತ ಹಾಸ್ಟೆಲ್ ಗೆ ಈ ರೀತಿ ನುಗ್ಗಿದ್ದ ಎಂದು ತಿಳಿದು ಬಂದಿದೆ.
ಆತನಿಗೆ ಉಳಿದುಕೊಳ್ಳಲು ವಿದ್ಯಾರ್ಥಿನಿಯೇ ಜಾಗದ ವ್ಯವಸ್ಥೆಯನ್ನು ಕೂಡ ಮಾಡಿದ್ದಳು ಎಂದು ತಿಳಿದು ಬಂದಿದೆ.