ನೆಲಮಂಗಲ : ಕಾರು ಚಾಲಕನ ಮೇಲೆ ಹಲ್ಲೆ ಮಾಡಿ ಯುವಕ ಪರಾರಿಯಾಗಿರುವ ಘಟನೆ ನಡೆದಿದೆ.
ನೆಲಮಂಗಲದ ಗುರುಭವನದ ಎದುರು ಈ ಘಟನೆ ನಡೆದಿದೆ. ಸಿಗ್ನಲ್ ಕೊಟ್ಟು ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದು ಅಮಾಯಕ ವ್ಯಕ್ತಿಗೆ ಯುವಕನೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ಸರಣಿ ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಕಾರು ಚಾಲಕರೊಬ್ಬರು ಬೇರೆ ವಾಹನಕ್ಕೆ ಅನುವು ಮಾಡಿ ಸಿಗ್ನಲ್ ಹಾಕಿದ್ದ. ಆ ವೇಳೆ ಬಲ ತಿರುವುತೆಗೆದುಕೊಳ್ಳುವ ವೇಳೆ ಮತ್ತೊಂದು ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ತಾವೇ ಡಿಕ್ಕಿ ಹೊಡೆದು ತಪ್ಪಿದ್ದರೂ ಸ್ಥಳದಲ್ಲಿ ಯುವಕರು ಗಲಾಟೆ ಮಾಡಿದ್ದಾರೆ. ಅದೇ ಸ್ಥಳದ ಪಕ್ಕದ ರಸ್ತೆಯಲ್ಲಿ ಮತ್ತೊಂದು ಅಪಘಾತ ಸಂಭವಿಸಿದೆ. ಟಾಟಾ ಎಸ್ ವಾಹನ ಚೇಸ್ ಮಾಡಿ, ಸ್ಥಳೀಯರಿಗೆ ಯುವಕ ಅವಾಜ್ ಹಾಕಿದ್ದಾನೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣಗಳು ನಡೆದಿವೆ.