ಕಲಬುರಗಿ : ರಥದ ಚಕ್ರ ಹರಿದ ಪರಿಣಾಮ ಮಹಿಳೆಯ ಎರಡು ಕಾಲುಗಳು ಕಟ್ ಆಗಿರುವ ಘಟನೆ ಜಿಲ್ಲೆಯ ಯಡ್ರಾಮಿ ತಾಲೂಕಿನ ಅರಳಗುಂಡಗಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆಯ ರಥೋತ್ಸವ ನಡೆಯುತ್ತಿತ್ತು. ಈ ವೇಳೆ ಚಕ್ರ ಹರಿದು ನಾಗಮ್ಮ ಗಂಭೀರವಾಗಿ ಗಾಯಗೊಂಡಿದ್ದು ಎರಡೂ ಕಾಲುಗಳು ಕಟ್ ಆಗಿವೆ ಎನ್ನಲಾಗಿದೆ. ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರೆ ನಡೆಯುತ್ತಿತ್ತು. ಮಾರ್ಚ್ 8ರಂದು ಈ ಘಟನೆ ನಡೆದಿದೆ.
ಸಂಜೆ ರಥೋತ್ಸವ ಆರಂಭವಾಗುತ್ತಿದ್ದಂತೆ ಗ್ರಾಮಸ್ಥರು ಭಕ್ತಿ-ಭಾವದಿಂದ ರಥ ಎಳೆಯಲು ಆರಂಭಿಸಿದ್ದಾರೆ. ಆದರೆ, ಜನಸಮೂಹ ಹೆಚ್ಚಾಗಿದ್ದರಿಂದಾಗಿ ರಥ ನಿಯಂತ್ರಣ ತಪ್ಪಿ ಜನರಿದ್ದಲ್ಲಿಗೆ ಹೋಗಿದೆ. ಆ ವೇಳೆ ಹಲವರು ತಪ್ಪಿಸಿಕೊಂಡಿದ್ದಾರೆ. ಆದರೆ, ನಾಗಮ್ಮ ಅವರಿಗೆ ಮಾತ್ರ ತಪ್ಪಿಸಿಕೊಳ್ಳಲು ಆಗಿಲ್ಲ. ಪರಿಣಾಮ ಅವರ ಕಾಲುಗಳ ಮೇಲೆ ರಥ ರಹಿದು, ಎರಡೂ ಕಾಲುಗಳು ಕಟ್ ಆಗಿವೆ ಎನ್ನಲಾಗಿದೆ. ಕೂಡಲೇ ಸ್ಥಳೀಯರು ನಾಗಮ್ಮ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಾಗಮ್ಮಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ : ಟೀಕಾಕಾರರಿಗೆ ಗಂಭೀರ್ ಖಡಕ್ ತಿರುಗೇಟು.. ದ್ರಾವಿಡ್ ಹಾಗೂ ಲಕ್ಷ್ಮಣ್‌ಗೆ ಪ್ರಶಸ್ತಿ ಅರ್ಪಣೆ!



















