ಕಾರವಾರ: ಕುಟುಂಬದೊಂದಿಗೆ ಗೋಕರ್ಣ ಪ್ಯಾರಡೈಸ್ ಬೀಚ್‌ಗೆ ಪ್ರವಾಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಬೋಟಿಂಗ್‌ಗೆ ತೆರಳಿದ್ದಾಗ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.
ಬೆಂಗಳೂರು ನಿವಾಸಿ ನಾಗರತಿನಮ್ (58) ಮೃತ ಮಹಿಳೆ. ಬೆಂಗಳೂರಿನಿಂದ ಕುಟುಂಬದ ಜೊತೆ ಆಗಮಿಸಿದ್ದ ಮಹಿಳೆ, ಬೋಟಿಂಗ್‌ಗೆ ತೆರಳಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ತಕ್ಷಣ 108 ಆಂಬುಲೆನ್ಸ್‌ಗೆ ಕರೆ ಮಾಡಿದರೂ ಆಂಬುಲೆನ್ಸ್ ಸರಿಯಾದ ಸಮಯಕ್ಕೆ ಸ್ಥಳಕ್ಕೆ ಬಂದಿಲ್ಲ ಎಂದು ಆರೋಪಿಸಲಾಗಿದೆ.
ಬಳಿಕ ಕುಮಟಾದಿಂದ ಖಾಸಗಿ ಅಂಬುಲೆನ್ಸ್ ಕರೆಸಿ ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಮಹಿಳೆ ಅಸುನೀಗಿದ್ದಾರೆ. ಈ ಘಟನಾ ಸಂಬಂಧ ಗೋಕರ್ಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ವಿಚಾರಣೆ ನೆಪದಲ್ಲಿ ಕ್ಯಾನ್ಸರ್ ರೋಗಿ ಮೇಲೆ ಮಾರಣಾಂತಿಕ ಹಲ್ಲೆ | ಕೆಂಭಾವಿ PSI ವಿರುದ್ಧ ಗಂಭೀರ ಆರೋಪ



















