ಪಂದ್ಯ ನಡೆಯುತ್ತಿದ್ದ ಸಂದರ್ಭದಲ್ಲೇ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿರುವ ಘಟನೆ ನಡೆದಿದೆ.
ಇಂತಹದೊಂದು ಅಪರೂಪದ ಘಟನೆ ಜೋಹಾನ್ಸ್ ಬರ್ಗ್ ನ ವಾಂಡರರ್ಸ್ ಸ್ಡೇಡಿಯಂನಲ್ಲಿ ನಡೆದಿದೆ.
ವಾಂಡರರ್ಸ್ ಕ್ರೀಡಾಂಗಣದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ಹಾಗೂ ಪಾಕಿಸ್ತಾನ್ ತಂಡಗಳ ಮಧ್ಯೆ ಮೂರನೇ ಏಕದಿನ ಪಂದ್ಯ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಪಂದ್ಯ ವೀಕ್ಷಿಸಲು ಆಗಮಿಸಿದ್ದರು. ಆದರೆ, ಗ್ಯಾಲರಿಯಲ್ಲಿ ಕೂತಿದ್ದ ಸಂದರ್ಭದಲ್ಲೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.
ಕೂಡಲೇ ಅವರನ್ನು ಸ್ಟೇಡಿಯಂನಲ್ಲಿದ್ದ ವೈದ್ಯಕೀಯ ಕೇಂದ್ರಕ್ಕೆ ಶಿಫ್ಟ್ ಮಾಡಲಾಯಿತು. ಇದಾದ ಕೂಡಲೇ ಸ್ಟೇಡಿಯಂನಲ್ಲಿನ ಬಿಗ್ ಸ್ಕ್ರೀನ್ ನಲ್ಲಿ ರಾಬೆಂಗ್ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ತೋರಿಸಲಾಯಿತು. ಇದನ್ನು ಕಂಡು ಅಭಿಮಾನಿಗಳು ಚಪ್ಪಾಳೆ ತಟ್ಟಿದ್ದಾರೆ.