ಬೆಂಗಳೂರು ಗ್ರಾಮಾಂತರ: ಜಾತ್ರೆಗೆ ಹೋಗಿದ್ದ ಸಂದರ್ಭದಲ್ಲಿ ಲಕ್ಷಾಂತರ ರೂ. ಬೆಲೆ ಬಾಳುವ ಮಾಂಗಲ್ಯ ಸರ ಕಳ್ಳತನ ಮಾಡಿರುವ ಘಟನೆ ನಡೆದಿದೆ.
ದೊಡ್ಡಬಳ್ಳಾಪುರದ ಮಲ್ಲೋಹಳ್ಳಿಯಲ್ಲಿ ಈ ಘಟನೆ ನಡೆದಿದೆ. ರಂಗಮ್ಮ(71) ಮಾಂಗಲ್ಯ ಸರ ಕಳೆದುಕೊಂಡ ಮಹಿಳೆ ಎನ್ನಲಾಗಿದೆ. ಏ. 13 ರಂದು ರಂಗನಾಥ ಸ್ವಾಮಿ ಬ್ರಹ್ಮರಥೋತ್ಸವ ಕಾರ್ಯಕ್ರಮ ನಡೆದಿತ್ತು. ಈ ವೇಳೆ 50 ಗ್ರಾಂ ತೂಕದ ಮಾಂಗಲ್ಯ ಸರ ಕಳ್ಳತನವಾಗಿದೆ. ನೆಲಮಂಗಲದಿಂದ ಮಲ್ಲೋಹಳ್ಳಿಗೆ ಬಸ್ ನಲ್ಲಿ ವೃದ್ಧೆಯ ಕುಟುಂಬದೊಂದಿಗೆ ಬಂದಿದ್ದರು. ಆದರೆ, ಜಾತ್ರೆಯ ಸಂದರ್ಭದಲ್ಲಿ ಮಜ್ಜಿಗೆ ಕುಡಿಯುತ್ತಿದ್ದ ಸಂದರ್ಭದಲ್ಲಿ ಸರ ನೋಡಿಕೊಂಡ ವೇಳೆ ಈ ವಿಚಾರ ಬೆಳಕಿಗೆ ಬಂದಿದೆ.
ಕೊರಳಲ್ಲಿ ದಾರ ಕಟ್ ಆಗಿ ನೇತಾಡುತ್ತಿತ್ತು. ಬರೀ ಮಹಿಳೆಯರೇ ಜಾತ್ರೆಗೆ ಬಂದಿದ್ದರು. ಕೂಲಿ ಮಾಡಿ ಮಾಂಗಲ್ಯ ಸರವನ್ನು ವೃದ್ಧೆ ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ದೊಡ್ಡಬೆಳವಂಗಲ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.