ಬೆಂಗಳೂರು: ಮಹಿಳೆಯೊಬ್ಬಳು ಗಂಡನ ಮೇಲಿನ ಕೋಪಕ್ಕೆ ಸ್ನೇಹಿತನೊಂದಿಗೆ ಸೇರಿ ತನ್ನ ಮಗುವನ್ನೇ ಅಪಹರಿಸಿರುವ ಘಟನೆ ನಡೆದಿದೆ.
ತಾಯಿಯಿಂದಲೇ ಕಿಡ್ನ್ಯಾಪ್ (kidnapped) ಆಗಿರುವ ಈ ಘಟನೆ ಬೆಂಗಳೂರಿನ ಹೊರವಲಯದ ಕೆಆರ್ ಪುರಂನಲ್ಲಿ ನಡೆದಿದೆ. ಮಗುವಿನ ತಾಯಿ (mother) ಅನುಪಮ ಮತ್ತು ಆತನ ಸ್ನೇಹಿತನಿಂದ ಈ ಕೃತ್ಯ ನಡೆದಿದೆ. ಈ ಕುರಿತು ಮಗುವಿನ ತಂದೆ ಕೆ.ಆರ್. ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಗುವನ್ನು ಅಪಹರಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
2014ರಲ್ಲಿ ವಿವಾಹವಾಗಿದ್ದ ಅನುಪಮ ಹಾಗೂ ಸಿದ್ಧಾರ್ಥ್ ಮಧ್ಯೆ ಆಗಾಗ ಜಗಳ ನಡೆಯುತ್ತಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಇಬ್ಬರೂ ದೂರವಾಗಿದ್ದರು. ಇಬ್ಬರ ವಿಚ್ಛೇದನದ ಅರ್ಜಿ ಕೂಡ ಕೋರ್ಟ್ ಗೆ ಹೋಗಿತ್ತು. ಕೋರ್ಟ್ ಆರುವರೆ ವರ್ಷದ ಮಗುವನ್ನು ಪತಿ ಸಿದ್ಧಾರ್ಥ್ಗೆ ನೀಡಿ ಆದೇಶಿಸಿತ್ತು.
ಇಂದು ಬೆಳಿಗ್ಗೆ ಎಂದಿನಂತೆ ಸಿದ್ಧಾರ್ಥ್ ತನ್ನ ಮಗುವನ್ನು ಶಾಲೆಗೆ ಬಿಡಲು ಅಪಾರ್ಟ್ಮೆಂಟ್ ಮುಂಭಾಗದಲ್ಲಿ ಶಾಲಾ ಬಸ್ಗೆ ಕಾಯುತ್ತಿದ್ದರು. ಈ ಸಂದರ್ಭದಲ್ಲಿ ತನ್ನ ಸ್ನೇಹಿತನೊಂದಿಗೆ ಬಂದ ತಾಯಿ ಅನುಪಮ ಸಿದ್ಧಾರ್ಥ್ ತಂದೆಯಿಂದ ಮಗುವನ್ನು ಕಿತ್ತುಕೊಂಡು ಹೋಗಿದ್ದರು. ಇದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸದ್ಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.