ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡಿವೋರ್ಸ್ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಕೆಲವೊಂದು ಡಿವೋರ್ಸ್ ಗಳು ಆಶ್ಚರ್ಯ ಮೂಡಿಸಿದ್ದಂತೂ ಸತ್ಯ. ಹೀಗೆ ಇಲ್ಲೊಂದು ಪ್ರಕರಣ ಸ್ವತಃ ನ್ಯಾಯಾಧೀಶರಿಗೆ ಅಚ್ಚರಿ ಮೂಡಿಸಿದೆ ಎಂದು ತಿಳಿದು ಬಂದಿದೆ.
ರಾಜ್ಯದ ಮಹಿಳೆಯೊಬ್ಬರು ವರ್ಷಕ್ಕೆ ಒಬ್ಬರಂತೆ 6 ಜನ ಮಾಜಿ ಪತಿಗಳಿಗೆ ಡಿವೋರ್ಸ್ ನೀಡಿ, ಈಗ 7ನೇ ಪತಿಯ ಡಿವೋರ್ಸ್ ಅರ್ಜಿ ಸಲ್ಲಿಸಿದ್ದಾರೆ. ಈ ಮಹಿಳೆ ಈಗಾಗಲೇ 6 ಡಿವೋರ್ಸ್ ಪ್ರಕರಣದಲ್ಲಿ ಮಾಜಿ ಪತಿಗಳಿಂದ ನಿರ್ವಹಣೆ ವೆಚ್ಚ ಪಡೆಯುತ್ತಿದ್ದಾಳೆ. ಈಗ 7ನೇ ಪತಿ ವಿರುದ್ದವೂ ಇದೇ ಪ್ರಕರಣ ದಾಖಲಿಸಿದ್ದಾಳೆ.

ಈ ವೇಳೆ ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದೀರಿ ಎಂದು ನ್ಯಾಯಾಧೀಶರು ಎಚ್ಚರಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಮಹಿಳೆ ಪತಿಯೊಂದಿಗೆ 6 ತಿಂಗಳು ಸಂಸಾರ ಮಾಡಿ. ನಂತರ ಪತಿ ವಿರುದ್ದ ದೈಹಿಕ ಹಾಗೂ ಹಿಂಸೆ, ಕ್ರೌರ್ಯ ಸೇರಿದಂತೆ ಇನ್ನಿತರ ಪ್ರಕರಣ ದಾಖಲಿಸಿ ಕಠಿಣ ಶಿಕ್ಷೆಗೆ ಆಗ್ರಹಿಸಿದ್ದಾಳೆ. ತಿಯರ ವಿರುದ್ದ ಈಕೆ ಸಕ್ಷನ್ 498ಎ ಪ್ರಕರಣ ದಾಖಲಿಸಿದ್ದಾಳೆ. ಇವಳ ಕಿರುಕುಳಕ್ಕೆ ಬೇಸತ್ತ 6 ಜನ ಮಾಜಿ ಪತಿಗಳು ಕೋರ್ಟ್, ಪ್ರಕರಣಕ್ಕೆ ಹೆದರಿ ಸೆಟ್ಲ್ ಮಾಡಿಕೊಂಡಿದ್ದಾರೆ. ಅವರೆಲ್ಲರಿಂದ ಇವಳು ಹೆಚ್ಚಿನ ಹಣ ಪಡೆದಿದ್ದಾಳೆ. ಆದರೆ, 7ನೇ ಪತಿ ಮಾತ್ರ ಇವಳಿಗೆ ದುಃಸ್ವಪ್ನವಾಗಿ ಪರಿಣಮಿಸಿದ್ದಾನೆ. ಇವಳ ಕೃತ್ಯ ಬಯಲಿಗೆ ಎಳೆಯಲು ಮುಂದಾಗಿದ್ದಾನೆ. ಪತ್ನಿಯ 498ಎ ವಿರುದ್ದ ಈತ ಕೂಡ ಪ್ರಕರಣ ದಾಖಲಿಸಿದ್ದಾನೆ. ಈ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಧೀಶರು ವಿಚಾರಣೆ ಆರಂಭಿಸಿದ್ದಾರೆ. ಅವಳ ಕುತಂತ್ರ ಅವಳಿಗೆ ತಿರುಗು ಬಾಣವಾಗಲಿದೆಯೇ ಕಾಯ್ದು ನೋಡಬೇಕಿದೆ.