ಬೆಂಗಳೂರು: ನಗರದಲ್ಲಿ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ರಸ್ತೆಗೆ ಇಳಿಯಬೇಕಾದ ಪರಿಸ್ಥಿತಿ ಬಂದೋದಗಿದೆ. ಏಕೆಂದರೆ ಎಲ್ಲಿ? ಯಾವ ಸಂದರ್ಭದಲ್ಲಿ ಮರ ಉರುಳಿ ಧರೆಗೆ ಬೀಳುತ್ತವೆ ಎಂಬುವುದು ಗೊತ್ತಾಗುತ್ತಿಲ್ಲ.
ನಗರದಲ್ಲಿ ಮಳೆ ಇಲ್ಲದಿದ್ದರೂ ಮರಗಳು ಧರೆಗೆ ಉರುಳುತ್ತಿವೆ. ನೃಪತುಂಗ ರಸ್ತೆಯಲ್ಲಿ ಮರವೊಂದು ಏಕಾಏಕಿ ರಸ್ತೆಗೆ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಬೈಕ್ ನಲ್ಲಿ ಸಾಗುತ್ತಿದ್ದ ಬೈಕ್ ಸವಾರ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮುಂಭಾಗದಲ್ಲಿ ಮರ ಧರೆಗೆ ಉರುಳಿದೆ.
ಬೃಹತ್ ಕೊಂಬೆ ರಸ್ತೆಗೆ ಬಿದ್ದ ಪರಿಣಾಮ ಸಂಚಾರಕ್ಕೆ ತೊಂದರೆಯಾಗಿತ್ತು. ಸಂಬಂಧಪಟ್ಟವರು ಬೇಗ ಬರದ ಹಿನ್ನೆಲೆಯಲ್ಲಿ ಬಸ್ ಚಾಲಕ ಹಾಗೂ ಕಂಡಕ್ಟರ್ ರಸ್ತೆ ಕ್ಲೀಯರ್ ಮಾಡಲು ಯತ್ನಿಸಿದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇಂದು ಬೆಳಗಿನ ಜಾವ ಈ ಘಟನೆ ನಡೆದಿದೆ.