ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ನಂದಿಗಿರಿಧಾಮದಲ್ಲಿ ಸಾವಿರಾರು ಭಕ್ತಾಧಿಗಳಿಂದ ನಂದಿಗಿರಿ ಪ್ರದಕ್ಷಣೆ ನಡೆಯಿತು.

ವಾಡಿಕೆಯಂತೆ ಪ್ರತಿ ವರ್ಷ ಆಷಾಡ ಮಾಸದ ಕೊನೆ ಸೋಮವಾರ ಭೋಗಂದೀಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪ್ರದಕ್ಷಿಣೆ ಆರಂಭ ಮಾಡಲಾಗುತ್ತದೆ. ಕಾರಹಳ್ಳಿ ಕ್ರಾಸ್ ಕಣಿವೆ ಬಸವಣ್ಣ ಮೂಲಕ ನಂದಿ ಗ್ರಾಮಕ್ಕೆ ಸುಮಾರು 17ಕಿ ಮೀ ಕಾಲ್ನಡಿಗೆ ಮೂಲಕ ಗಿರಿಪ್ರದಕ್ಷಿಣೆ ನಡೆಸಲಾಗುತ್ತದೆ.