ಬೆಂಗಳೂರು: ಸಂಚಾರ ನಿಯಮ(traffic rules) ಉಲ್ಲಂಘಿಸುವವರ ವಿರುದ್ಧ ಪೊಲೀಸರು(police) ಸಮರ ಸಾರಿದ್ದಾರೆ. ಹೀಗಾಗಿ ಇತ್ತೀಚೆಗೆ ಸವಾರರು ಎಚ್ಚರಿಕೆಯಿಂದ ಇರುತ್ತಿದ್ದಾರೆ. ಆದರೂ ಕೆಲವರು ಮಾತ್ರ ನಿಯಮಗಳಿಗೆ ಕ್ಯಾರೇ ಅನ್ನದ ಘಟನೆಗಳು ಬೆಳಕಿಗೆ ಬರುತ್ತಿರುತ್ತವೆ. ಈಗ ಇಂತಹುದೊಂದು ಪ್ರಕರಣ ಬೆಳಕಿಗೆ ಬಂದಿದೆ.
ಬೈಕ್ ಸವಾರನೊಬ್ಬ ಎರಡು ವರ್ಷಗಳಲ್ಲಿ ಬರೋಬ್ಬರಿ 311 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ. ಹೀಗಾಗಿ ಈತನಿಗೆ ಬರೋಬ್ಬರಿ 1.61 ಲಕ್ಷ ರೂ. ದಂಡ ಬಿದ್ದಿದೆ. ಈತ 2023ರ ಮಾರ್ಚ್ ನಿಂದ ಇಲ್ಲಿಯವರೆಗೂ 311 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ್ದಾನೆ.
ಕೆಎ-05, ಜೆಎಕ್ಸ್-1344 ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನ ಸವಾರ ನಿಯಮ ಉಲ್ಲಂಘಿಸಿದ್ದಾನೆ. ಹೆಲ್ಮೆಟ್ ಧರಿಸದಿರುವುದು,(Not wearing a helmet) ಸಿಗ್ನಲ್ ಜಂಪ್, (Signal jump) ಏಕಮುಖ ಚಾಲನೆ,( One way driving) ನಿರ್ಬಂಧಿತ ಸ್ಥಳದಲ್ಲಿ ವಾಹನ ನಿಲುಗಡೆ ಸೇರಿದಂತೆ ಹಲವು ರೀತಿಯ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಾನೆ. ಆದರೆ, ಇದುವರೆಗೂ ಆತ ದಂಡ ಪಾವತಿಸಿರಲಿಲ್ಲ. ಹೀಗಿಗ ಆತನಿಗೆ 1.61 ಲಕ್ಷ ರೂ. ದಂಡ ವಿಧಿಸಲಾಗಿದೆ.
ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕೆ ಕಳೆದ ವರ್ಷ 1,05,500 ರೂ. ಇದ್ದ ದಂಡ ಇತ್ತು. ಆದರೆ, ಈ ವರ್ಷ 1,61,500 ರೂ.ಗೆ ದಂಡ ಏರಿಕೆಯಾಗಿದೆ. ಈ ಕುರಿತು ಹಲವು ಬಾರಿ ನೋಟಿಸ್(notice) ನೀಡಿದರೂ ಆತ ಪಾವತಿಸಿರಲಿಲ್ಲ. ಆದರೆ, ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ(social media) ವೈರಲ್ ಆಗುತ್ತಿದ್ದಂತೆ ಸವಾರನ ವಿರುದ್ಧ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.