ಪಾಟ್ನಾ: ಇತ್ತೀಚೆಗೆ ದರೋಡೆ ಪ್ರಕರಣಗಳು ಹೆಚ್ಚಾಗುತ್ತಿದ್ದು, ಜನರು ಆತಂಕದಲ್ಲಿ ಬದುಕು ಸಾಗಿಸುವಂತಾಗುತ್ತಿದೆ. ಈಗ ದೇಶದಲ್ಲಿ ಮತ್ತೊಂದು ಭಯಾನಕ ದರೋಡೆಯೊಂದು ಬೆಳಕಿಗೆ ಬಂದಿದೆ.
ಬಿಹಾರದ (Bihar) ಭೋಜ್‌ಪುರ ಜಿಲ್ಲೆಯ ಗೋಪಾಲಿ ಚೌಕ್ ನಲ್ಲಿ ಫಿಲ್ಮಿಸ್ಟೈಲ್ ಭಯಾನಕ ದರೋಡೆಯೊಂದು ನಡೆದಿದೆ. 7 ಜನ ದರೋಡೆಕೋರರ ಗುಂಪು ಆಭರಣ ಮಳಿಗೆಗೆ ನುಗ್ಗಿ 8 ನಿಮಿಒಷಗಳಲ್ಲಿ ಬರೋಬ್ಬರಿ 25 ಕೋಟಿ ರೂ. ಮೌಲ್ಯದ ಚಿನ್ನಾಭರಣ (Jewellery) ದೋಚಿ ಪರಾರಯಾಗಿದೆ.
ಸೋಮವಾರ (ಇಂದು) ಮುಂಜಾನೆ ಬಿಹಾರದ ಅರ್ರಾಹ್‌ನಲ್ಲಿರುವ ತನಿಷ್ಕ್ ಆಭರಣ ಶೋರೂಮ್‌ಗೆ ನುಗ್ಗಿದ ಶಸ್ತ್ರಸಜ್ಜಿತ ದರೋಡೆಕೋರರು 25 ಕೋಟಿ ರೂ. ಮೌಲ್ಯದ ಚಿನ್ನಾಭರಣ ದೋಚಿದ್ದಾರೆ. ಈ ಕೃತ್ಯ ತಡೆಯಲು ಯತ್ನಿಸಿದ ಮ್ಯಾನೇಜರ್ ಮೇಲೆ ದರೋಡೆಕೋರರು ಹಲ್ಲೆ ನಡೆಸಿದ್ದಾರೆ. 8 ನಿಮಿಷದಲ್ಲಿ ಚಿನ್ನಾಭರಣ ಸೇರಿ ನಗದನ್ನು ದೋಚಿ ಪರಾರಿಯಾಗಿದ್ದಾರೆ. ದರೋಡೆಕೋರರ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.