ಹಾಸನ: ರಾಷ್ಟ್ರೀಯ ಹೆದ್ದಾರಿಯಲ್ಲಿ ಯುವಕನೋರ್ವ ಕಾರಿನ ಮೇಲೆ ನಿಂತು ಲಾರಿ ಚಾಲಕನಿಗೆ ಹೊಡೆಯಲು ಯತ್ನಿಸಿ ಪುಂಡಾಟ ಮೆರೆದಿದ್ದಾನೆ.
ಚಲಿಸುತ್ತಿದ್ದ ಕಾರಿನಲ್ಲಿ ನಿಂತು ಕೈಯಲ್ಲಿ ಲಾಠಿ ಹಿಡಿದು ಯುವಕ ಪುಂಡಾಟ ಮೆರೆದಿದ್ದಾನೆ. ಲಾರಿ ಚಾಲಕನಿಗೆ ಓವರ್ ಟೇಕ್ ಮಾಡಲು ಅವಕಾಶ ನೀಡದೆ ಕಿರಿಕ್ ಮಾಡಿದ್ದಾನೆ. ಅಲ್ಲದೇ, ಲಾಠಿಯಿಂದ ಗಾಜಿಗೆ ಹೊಡೆದಿದ್ದಾನೆ. ಕೈಯಲ್ಲಿ ಪೊಲೀಸರ ಲಾಠಿ ಹಿಡಿದು, ಲಾರಿ ನಿಲ್ಲಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಸಕಲೇಶಪುರ ತಾಲ್ಲೂಕಿನ ಬಾಳ್ಳುಪೇಟೆಯಲ್ಲಿ ಈ ಘಟನೆ ನಡೆದಿದೆ.
ಮಹಮ್ಮದ್ ನಿಶಾನ್ ಹಲ್ಲೆಗೊಳಗಾಗಿರುವ ಚಾಲಕ. ಡಸ್ಟರ್ ಕಾರಿನಲ್ಲಿ ಬಂದ ಯುವಕರು ಅಟ್ಯಾಕ್ ಮಾಡಿದ್ದಾರೆ. ವಾಹನ ಓವರ್ ಟೇಕ್ ಮಾಡುವ ವಿಚಾರದಲ್ಲಿ ಕಿರಿಕ್ ಮಾಡಿದ್ದಾರೆ ಎನ್ನಲಾಗಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಸ್ಟರ್ ಕಾರು ಮತ್ತು ಧೀರಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.