ಕಲಬುರಗಿ : ಗರ್ಭಗುಡಿಗೆ ಹೊಕ್ಕ ಕಳ್ಳನೊಬ್ಬ ದೇವರ ವಿಗ್ರಹದ ಮೇಲಿರುವ ಚಿನ್ನಾಭರಣವನ್ನು ಕದ್ದಯಯ್ದಿರುವ ಘಟನೆ ಕಲಬುರಗಿಯ ಕುವೆಂಪು ನಗರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನಡೆದಿದೆ.
ಖದೀಮನು ಕಬ್ಬಿಣದ ರಾಡ್ ಬಳಸಿ ದೇವಸ್ಥಾನದ ಬೀಗ ಮುರಿದು ಗರ್ಭಗುಡಿಗೆ ನುಗ್ಗಿದ್ದಾನೆ. ಬಳಿಕ ದೇವಿಯ ವಿಗ್ರಹದ ಮೇಲಿದ್ದ ಚಿನ್ನಾಭರಣಗಳನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ.
ಕಳ್ಳನು ದೇವಿಯ ಕೊರಳಲ್ಲಿದ್ದ ಸುಮಾರು 9 ಗ್ರಾಂ ತೂಕದ ಬಂಗಾರದ ತಾಳಿ ಹಾಗೂ 100 ಗ್ರಾಂ ತೂಕದ ಬೆಳ್ಳಿಯ ಮುಖವಾಡವನ್ನು ಕದ್ದಿರುವುದಾಗಿ ತಿಳಿದುಬಂದಿದೆ. ಈ ಸಂಪೂರ್ಣ ಕೃತ್ಯ ದೇವಸ್ಥಾನದ ಸಿಸಿ ಕ್ಯಾಮೆರಾದಲ್ಲಿ ಸೆರೆಗೊಂಡಿದೆ.
ಘಟನೆ ಸಂಬಂಧ ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪತ್ತೆಹಚ್ಚಲು ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಇದನ್ನೂ ಓದಿ : ಐತಿಹಾಸಿಕ ಕರಗ ಮಹೋತ್ಸವಕ್ಕೆ ಬೆಂಗಳೂರು ಸಜ್ಜು


















