ಬೆಂಗಳೂರು | ಮೆಜೆಸ್ಟಿಕ್‌ನಲ್ಲಿ KSRTC ಬಸ್ ನಿಲ್ದಾಣದಲ್ಲಿ ಕಳ್ಳನೊನಬ್ಬ ಟಿಕೆಟ್ ಮೆಷಿನ್ನನ್ನೇ ಕದ್ದೊಯ್ದಿದಿರುವ ಘಟನೆ ನಡೆದಿದೆ. ಬೆಂಗಳೂರು-ಶಿರಸಿ ಮಾರ್ಗದ ನಾನ್-ಎಸಿ ಸ್ಲೀಪರ್ ಬಸ್‌ನಲ್ಲಿ ಈ ಘಟನೆ ನಡೆದಿದ್ದು, ಕಂಡಕ್ಟರ್ ಬ್ಯಾಗ್‌ನಲ್ಲಿದ್ದ ಟಿಕೆಟ್ ಮೆಷಿನ್ ಕಳ್ಳತನವಾಗಿದೆ.
ಕೃತ್ಯದಿಂದಾಗಿ, ಮೆಜೆಸ್ಟಿಕ್ ನಿಲ್ದಾಣದಲ್ಲಿ ಬಸ್ ಎರಡು ಗಂಟೆಗಳ ಕಾಲ ನಿಂತಲ್ಲೇ ನಿಂತಿದ್ದು, ಬಸ್ ಸಿಬ್ಬಂದಿ ಮತ್ತು ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದ್ದಾರೆ. ಅಂತಿಮವಾಗಿ ಸಿಬ್ಬಂದಿ ಮ್ಯಾನುವಲ್ ಟಿಕೆಟ್ ನೀಡಿ ಬಸ್ ಸೇವೆ ಆರಂಭಿಸಿದ್ದಾರೆ.
ಖದೀಮರು ಬ್ಯಾಗ್ ಕದ್ದೊಯ್ಯುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಸಂಬಂಧಿಸಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ನಾಗರಹೊಳೆ, ಬಂಡೀಪುರ ಸಫಾರಿಗೆ ಸರ್ಕಾರದಿಂದ ಗ್ರೀನ್ ಸಿಗ್ನಲ್ | ಸಿಡಿದೆದ್ದ ರೈತ ಸಂಘಟನೆಗಳು



















