ಕೋಲಾರ | ಮನೆಗೆ ನುಗ್ಗಿದ ಕಳ್ಳನೋರ್ವ ವೃದ್ದೆಯ ಚಿನ್ನದ ಸರ ಕದ್ದೊಯ್ದ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಹೂವಳ್ಳಿ ಗ್ರಾಮದಲ್ಲಿ ನಡೆದಿದೆ.

ಮನೆಯಲ್ಲಿದ್ದ ವೃದ್ದೆ ರತ್ನಮ್ಮ ಎಂಬವರ ಕತ್ತಲಿದ್ದ ಸುಮಾರು 6 ಲಕ್ಷ ಮೌಲ್ಯದ 58 ಗ್ರಾಂ ತೂಕದ ಸರ ಕದ್ದು ಕ್ಷಣಾರ್ಧದಲ್ಲೇ ಕಳ್ಳ ಎಸ್ಕೇಪ್ ಆಗಿದ್ದಾನೆ.
ಮನೆಯಲ್ಲಿ ವೃದ್ದೆ ಏಕಾಂಗಿಯಾಗಿದ್ದ ಮಾಹಿತಿ ತಿಳಿದು ಕೃತ್ಯ ಎಸಗಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವೃದ್ದೆ ರತ್ನಮ್ಮ ಮನೆಗೆ ಕೋಲಾರ ಎಸ್.ಪಿ ಕನ್ನಿಕಾ ಸಿಕ್ರಿವಾಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನೂ ಓದಿ ; ರಷ್ಯಾದ ತೈಲ ಖರೀದಿಗೆ ಭಾರತಕ್ಕೆ ಅಮೆರಿಕದಿಂದ 30 ದಿನಗಳ ವಿನಾಯಿತಿ



















