ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 35 ಜನ ಸಜೀವವಾಗಿ ದಹನಗೊಂಡಿರುವ ಘಟನೆ ನಡೆದಿದೆ.
ಈ ಘಟನೆ ದಕ್ಷಿಣ ಕುವೈತ್ ನ ಮಂಗಾಫ್ ನಗರದಲ್ಲಿ ನಡೆದಿದೆ. ಮಲಯಾಳಿ ಉದ್ಯಮಿಯೊಬ್ಬರಿಗೆ ಸೇರಿದ್ದ ಕಟ್ಟಡದಲ್ಲಿಯೇ ಬೆಂಕಿ ಕಾಣಿಸಿಕೊಂಡಿದೆ. ಪರಿಣಾಮ 35 ಜನ ಸಜೀವವಾಗಿ ದಹನಗೊಂಡಿದ್ದಾರೆ ಎನ್ನಲಾಗಿದೆ.
ಸಾವನ್ನಪ್ಪಿದವರ ಪೈಕಿ ನಾಲ್ವರು ಭಾರತೀಯರಿದ್ದಾರೆ. ಈ ಕಟ್ಟಡದಲ್ಲಿರುವವರು ಹೆಚ್ಚಿನವರು ಮಲಯಾಳಿಗಳು ಎನ್ನಲಾಗಿದೆ. ಮೃತರಲ್ಲಿ ಇಬ್ಬರು ತಮಿಳುನಾಡು ಮತ್ತು ಉತ್ತರ ಭಾರತದವರು ಇದ್ದಾರೆ. ಅಲ್ಲದೇ, ಹಲವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಂಕಿ ಹೊತ್ತುತ್ತಿದ್ದಂತೆ ಹಲವರು ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾರೆ. ಇನ್ನೂ ಕೆಲವರು ಅದರಲ್ಲಿಯೇ ಬೆಂದು ಹೋಗಿದ್ದಾರೆ. ಈ ಕಟ್ಟಡದಲ್ಲಿ ಸುಮಾರು 195 ಜನರಿದ್ದರು ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ.