ಬೆಂಗಳೂರು: ನಗರದಲ್ಲಿ ಹದಿಹರೆಯದವರ ಪಾರ್ಟಿ ನಡೆದಿದೆ ಎಂಬ ಆಘಾತಕಾರಿ ವಿಷಯವೊಂದು ಬೆಳಕಿಗೆ ಬಂದಿದೆ.
ಡ್ರಗ್ಸ್ ಜೊತೆಗೆ ಸೆಕ್ಸ್ ವರ್ಕ್ ಕೂಡ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಪ್ರತಿಷ್ಠಿತ ಕಾಲೇಜಿನ ಯುವಕ- ಯುವತಿಯರು ಈ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಕುರಿತು ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಕುರಿತು ದೂರು ದಾಖಲಾದರೂ ಎಫ್ ಐಆರ್ ಮಾತ್ರ ದಾಖಲಾಗಿಲ್ಲ. ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಅಮಾರವತಿ ಬಡವಾಣೆಯ ಪ್ಲಾಟ್ ವೊಂದರಲ್ಲಿ ಈ ಪಾರ್ಟಿ ನಡೆದಿದೆ ಎನ್ನಲಾಗಿದೆ.
ಯುವಕ- ಯುವತಿಯರು ಈ ಲೇಟ್ ನೈಟ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಆದರೆ, ಈ ಪಾರ್ಟಿಯ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ. ಕಳೆದ ಕ್ರಿಸ್ಮಸ್ ದಿನ ಈ ಪಾರ್ಟಿ ನಡೆದಿದೆ ಎನ್ನಲಾಗಿದೆ.
ಚಿಲ್ಲಮ್ ನಲ್ಲಿ ಗಾಂಜಾ ಹೊಡೆಯೋ ವಿಡಿಯೋ ಹಾಗೂ ಫೋಟೋಗಳಿದ್ದರೂ ಎಫ್ ಐಆರ್ ದಾಖಲಿಸಿಕೊಂಡಿಲ್ಲ. ಜ. 12ರಂದು ಈ ಕುರಿತು ಪೀಣ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ಆದರೂ ಪೊಲೀಸರು ಯವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.