ರಾಯಚೂರು: ಸಮಾಜವನ್ನು ತಿದ್ದಿ ತೀಡಬೇಕಾದ ಶಿಕ್ಷಕನೇ ಅತಿಥಿ ಶಿಕ್ಷಕಿಯನ್ನು ಮಂಚಕ್ಕೆ ಕರೆದು ಒದೆ ತಿಂದಿರುವ ಘಟನೆಯೊಂದು ನಡೆದಿದೆ.
ಶಾಲಾ ಅತಿಥಿ ಶಿಕ್ಷಕಿಗೆ (Guest Faculty) ಸಹ ಶಿಕ್ಷಕನಿಂದ (Teacher) ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿರುವ ಘಟನೆ ಜಿಲ್ಲೆಯ ಹೊರವಲಯದಲ್ಲಿರುವ ಆದರ್ಶ ಸರ್ಕಾರಿ ಶಾಲೆಯಲ್ಲಿ ನಡೆದಿದೆ. ಶಿಕ್ಷಕಿಯ ಸಂಬಂಧಿಕರು ಸಹ ಶಿಕ್ಷಕನ ಮೈ ಮೇಲಿದ್ದ ಬಟ್ಟೆ ಹರಿಯುವಂತೆ ಥಳಿಸಿದ್ದಾರೆ. ನಂತರ ಸಿಕ್ಷಕಿಯ ಕಾಲು ಮುಟ್ಟಿ ನಮಸ್ಕರಿಸಿ ಶಿಕ್ಷಕ ಕ್ಷಮೆ ಕೇಳಿದ್ದಾನೆ.
ಅದೇ ಆದರ್ಶ ಸರ್ಕಾರಿ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ ಮೆಹಬೂಬ್ ಅಲಿ ಎಂಬಾತನೇ ಧರ್ಮದೇಟು ತಿಂದ ಶಿಕ್ಷಕ. ಸಹ ಶಿಕ್ಷಕ ಮೆಹಬೂಬ್ ಅಲಿ ತಮ್ಮದೆ ಶಾಲೆಯ ಅತಿಥಿ ಶಿಕ್ಷಕಿಗೆ ಅಸಹ್ಯವಾಗಿ ಮೆಸೇಜ್ ಮಾಡಿ, ಮಂಚಕ್ಕೆ ಕರೆದಿದ್ದ ಎನ್ನಲಾಗಿದೆ. ಹೀಗಾಗಿ ಸೋಮವಾರ ಶಾಲೆ ಬಳಿ ಬಂದಿದ್ದ ಶಿಕ್ಷಕಿಯ ಸಂಬಂಧಿಕರು ಮೆಹಬೂಬ್ ಅಲಿ ಮೈ ಮೇಲಿದ್ದ ಬಟ್ಟೆ ಹರಿಯುವಂತೆ ಧರ್ಮದೇಟು ನೀಡಿದ್ದಾರೆ.
ಮೆಹಬೂಬ್ ಅಲಿ ಶಿಕ್ಷಕಿಯ ಕಾಲಿಗೆ ಬಿದ್ದು ಕ್ಷಮೆಯಾಚನೆ ಮಾಡಿದ್ದಾರೆ. ಕೊನೆಗೆ ತಪ್ಪೊಪ್ಪಿಗೆ ಪತ್ರ ಬರೆದು ಕ್ಷಮೆ ಕೇಳಿದ್ದಾರೆ. ಆತ ಕ್ಷಮೆ ಕೇಳಿದ್ದರಿಂದಾಗಿ ದೂರು ನೀಡದೇ ಶಿಕ್ಷಕಿ ಸುಮ್ಮನಾಗಿದ್ದಾರೆ. ಇದೀಗ ಶಿಕ್ಷಕ, ಶಿಕ್ಷಕಿ ಕಾಲಿಗೆ ಬಿದ್ದು ಕ್ಷಮೆ ಕೇಳುವ ವಿಡಿಯೋ ವೈರಲ್ ಆಗಿದೆ.