ಚಿತ್ರದುರ್ಗ: ಚಿತ್ರದುರ್ಗದ ಮಸೀದಿಯಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದ್ದು, 250 ವರ್ಷಗಳ ಗೋರಿಯ ಎದೆ ಭಾಗದಲ್ಲಿ ಉಸಿರಾಟದ ಲಕ್ಷಣ ಕಂಡು ಬಂದಿದೆ. ಇದನ್ನು ಕಂಡು ಜನರು ಅಚ್ಚರಿ ಪಡುತ್ತಿದ್ದಾರೆ.
ಚಿತ್ರದುರ್ಗದ ಫಕ್ರುಲ್ಲಾ ಶಾ ಖಾದ್ರಿ ಎಂಬ ಗೋರಿಯೇ ಉಸಿರಾಡಿದ ಸ್ಥಿತಿಯಲ್ಲಿ ಕಂಡು ಬಂದಿದೆ. ಫಕ್ರುಲ್ಲಾ ಶಾ ಖಾದ್ರಿ ದರ್ಗಾ ಸುಮಾರು 250 ವರ್ಷಗಳಷ್ಟು ಹಳೆಯದಾಗಿದೆ. ಗೋರಿಯ ಉಸಿರಾಟ ಕಂಡು ಪವಾಡ ಎಂದ ಮುಸ್ಲಿಂರು ಹೇಳುತ್ತಿದ್ದಾರೆ. ಗೋರಿ ಉಸಿರಾಟ ಸುದ್ದಿ ತಿಳಿದು ನೋಡಲು ಜನ ಸಾಗರವೇ ಹರಿದು ಬಂದಿದೆ. ಗೋರಿಗೆ ಮುಚ್ಚಿರುವ ಹೊದಿಕೆ ಏರಿಳಿತ ಕಂಡು ಉಸಿರಾಡುತ್ತಿದೆ ಎಂಬ ವದಂತಿ ಹಬ್ಬಿದೆ.