ಬೆಂಗಳೂರು : ನಿಲುಗಡೆ ಮಾಡಿರುವ ಸ್ಕೂಲ್ ಬಸ್ ನಲ್ಲಿ ಬೆಂಕಿ ಹೊತ್ತಿಕೊಂಡು ವ್ಯಕ್ತಿ ಸಾವನ್ನಪ್ಪಿರುವ ಘಟನೆ ಬಾಣಸವಾಡಿ ಓಎಂಬಿಆರ್ ಲೇಔಟ್ ನಲ್ಲಿ ನಡೆದಿದೆ.
ಪ್ರಕರಣ ಸಂಬಂಧಿಸಿದಂತೆ ಕೊಲೆ ಮಾಡುವ ಉದ್ದೇಶದಿಂದ ಶಾಲಾ ವಾಹನಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆಂಬ ಶಂಕೆ ವ್ಯಕ್ತವ್ಯವಾಗಿದೆ.
ಸುಮಾರು ಮೂರ್ನಾಲ್ಕು ತಿಂಗಳಿಂದ ಬಸ್ ಮಾರಾಟಕ್ಕೆಂದು ಮಾಲೀಕ ತಮ್ಮ ಮನೆ ಪಕ್ಕದಲ್ಲೇ ಬಸ್ ನಿಲ್ಲಿಸಿದ್ದ. ವಾಹನ ನಿಲುಗಡೆ ಮಾಡಿದ ಜಾಗ ಪಡ್ಡೆ ಹುಡುಗರ ಅಡ್ಡೆಯಾಗಿತ್ತು. ಎಷ್ಟು ಬಾರಿ ಬಸ್ ಡೋರ್ ಲಾಕ್ ಮಾಡಿದರೂ, ಹುಡುಗರು ಒಳಗೆ ಹೋಗಿ ಕೂರುತ್ತಿದ್ದರು. ಅವರ ನಡುವೆಯ ಗಲಾಟೆ ಆಗಿ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿಗೆ ಸುಟ್ಟು ಕರಕಲಾದ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ.
ಸದ್ಯ, ಅಗ್ನಿ ಶಾಮಕ ದಳ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದ್ದಾರೆ. ಸ್ಥಳಕ್ಕೆ ಬಾಣಸವಾಡಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅನುಮಾನಸ್ಪದ ಸಾವು ಪ್ರಕರಣ ಎಂದು ರಾಮಮೂರ್ತಿ ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.



















