ವಿಜಯನಗರ: ವಿದ್ಯಾರ್ಥಿಯೋರ್ವ ತಂದೆಯ ಸಾವಿನ ನೋವಿನಲ್ಲೂ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿರುವ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ.
ಹೊಸಪೇಟೆಯ ಟಿಬಿ ಡ್ಯಾಂನ ವಿದ್ಯಾರ್ಥಿ ಹರಿಧರನ್ ತಂದೆ ಕಳೆದುಕೊಂಡ ನೋವಿನಲ್ಲಿ ಪರೀಕ್ಷೆಗೆ ಹಾಜರಾಗಿದ್ದಾನೆ. ವಿದ್ಯಾರ್ಥಿ ಹರಿಧರನ್ ನ ತಂದೆ ಸೆಲ್ವಕುಟ್ಟಿ ಅನಾರೋಗ್ಯದಿಂದಾಗಿ ತಮಿಳುನಾಡಿನಲ್ಲಿ ಸಾವನ್ನಪ್ಪಿದ್ದಾರೆ. ಹೀಗಾಗಿ ಇಂದು ತಂದೆ ಸೆಲ್ವಕುಟ್ಟಿ ಅವರ ಅಂತ್ಯಕ್ರಿಯೆ ಇದೆ.
ಈ ನೋವಿನಲ್ಲೂ ಮಗ ಪರೀಕ್ಷೆಗೆ ಹಾಜರಾಗಿದ್ದಾನೆ. ಇಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಸಮಾಜ ವಿಜ್ಞಾನ ಪರೀಕ್ಷೆ ಬರೆಯುತ್ತಿದ್ದಾರೆ. ಹರಿಧರನ್ ಕೂಡ ಎಲ್ಲ ಮಕ್ಕಳಂತೆ ಹೋಗಿ ನೋವಿನಲ್ಲೂ ಪರೀಕ್ಷೆ ಬರೆಯುತ್ತಿದ್ದಾನೆ.
ಹೊಸಪೇಟೆಯ ಟಿಬಿ ಡ್ಯಾಂನ ಸಂತ ಜೋಸೆಫ್ ಶಾಲೆಯಲ್ಲಿ ಹರಿಧರನ್ ಓದುತ್ತಿದ್ದ. ಸಹಪಾಠಿಗಳು, ಶಿಕ್ಷಕರು ವಿದ್ಯಾರ್ಥಿಗೆ ಸಾಂತ್ವನ ಹೇಳಿ ಪರೀಕ್ಷೆ ಬರೆಯಲು ಆತ್ಮವಿಶ್ವಾಸ ಮೂಡಿಸಿದ್ದಾರೆ.