ದೊಡ್ಡಬಳ್ಳಾಪುರ: ವಿದ್ಯಾರ್ಥಿಯೊಬ್ಬ ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ಲಕ್ಷ ಲಕ್ಷ ಕಳೆದುಕೊಂಡಿರುವ ಘಟನೆಯೊಂದು ನಡೆದಿದೆ.
ಬೆಟ್ಟಿಂಗ್ ಆಪ್ ಮೂಲಕ ವಿದ್ಯಾರ್ಥಿಯೊಬ್ಬ ಬರೋಬ್ಬರಿ 2,38,995 ರೂ. ಕಳೆದುಕೊಂಡಿದ್ದಾನೆ. ದೊಡ್ಡಬಳ್ಳಾಪುರ ತಾಲೂಕಿನ ಸರಕಾರಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ಓದುತ್ತಿರುವ ವಿದ್ಯಾರ್ಥಿಯೊಬ್ಬ ಈ ರೀತಿ ಹಣ ಕಳೆದುಕೊಂಡವನು.

ಈತ ಆನ್‌ಲೈನ್ ಬೆಟ್ಟಿಂಗ್ ಆಡುತ್ತಿದ್ದ ವೇಳೆ ಇನ್‌ಸ್ಟಾಗ್ರಾಮ್ ಬಳಸುತ್ತಿದ್ದ. ಅದರಲ್ಲಿ ಒಂದು ಟೆಲಿಗ್ರಾಮ್ ಲಿಂಕ್ ನೀಡಲಾಗಿತ್ತು. ಇದರಲ್ಲಿ ಸೇರಿಕೊಂಡರೆ ನಾವು 7 ಕ್ರಿಕೆಟ್ ತಂಡಗಳನ್ನು ನೀಡುತ್ತೇವೆ. ಅವುಗಳನ್ನು ತೆಗೆದುಕೊಂಡು ಬೆಟ್ಟಿಂಗ್ ಆ್ಯಪ್‌ನಲ್ಲಿ ತಂಡವನ್ನು ರಚಿಸಿದರೆ, ನೀವು 1 ಕೋಟಿ ರೂಪಾಯಿ ಹಣ ಗೆಲ್ಲಬಹುದು ಎಂದು ಹೇಳಿದ್ದಾರೆ. ಹೀಗಾಗಿ ಯುವಕ ಫೋನ್ ಪೇ ಮೂಲಕ 1,999, 14,999, 21,999, 49,999 ಸೇರಿ ಒಟ್ಟು 88,996 ರೂಪಾಯಿ ಹಣ ಪಾವತಿಸಿ ರಾಮ್ ಚೌಧರಿ ಎಂಬ ಹೆಸರಿನ ಟೆಲಿಗ್ರಾಮ್ ಗುಂಪಿಗೆ ಸೇರಿದ್ದಾನೆ.
ಭಾರತ – ಅಫ್ಘಾನಿಸ್ತಾನ ಕ್ರಿಕೆಟ್ ಪಂದ್ಯಕ್ಕೆ ಟೆಲಿಗ್ರಾಮ್‌ನಲ್ಲಿ 7 ತಂಡಗಳನ್ನು ಕಳುಹಿಸಿದ್ದಾರೆ. ಬೆಟ್ಟಿಂಗ್‌ಗೆ ತಂಡ ರಚನೆಯ ಸಮಯ ತಡವಿದ್ದ ಹಿನ್ನೆಲೆ ವಿದ್ಯಾರ್ಥಿ ಕೇವಲ 3 ಪಂದ್ಯಗಳನ್ನು ಮಾತ್ರ ಆಯ್ಕೆ ಮಾಡಿದ್ದಾನೆ. ಪಂದ್ಯ ಮುಗಿದ ನಂತರ ಅವರು ಕಳುಹಿಸಿದ 7 ತಂಡಗಳಲ್ಲಿ ಕೊನೆಯ ತಂಡವು ಗೆದ್ದಿದ್ದು, ಆತನಿಗೆ ಹಣ ಸಿಕ್ಕಿಲ್ಲ. ಈಗ ವಿದ್ಯಾರ್ಥಿ ದೂರು ನೀಡಿದ್ದಾನೆ.
