ಬೆಂಗಳೂರು: ಅಸತ್ಯದ ಲೋಕದಲ್ಲಿ ಸತ್ಯ ಹುಡುಕಿ ಹೊರಡುತ್ತಿರುವಾದಿಗ ವಿದ್ಯಾರ್ಥಿಯೊಬ್ಬ ಮನೆ ಬಿಟ್ಟು ಹೋಗಿರುವ ಘಟನೆ ನಡೆದಿದೆ.
ನಾನು ದೇವರ ಮಗ, ಅಸತ್ಯ ಲೋಕದಲ್ಲಿ ಸತ್ಯ ಹುಡುಕಲು ಹೋಗುತ್ತಿದ್ದೇನೆ. ನಾನು ವಿಷ್ಣುವಿನ ಮಗ. ನನ್ನನ್ನು ಹುಡುಕಬೇಡಿ ಅಂತ ಪತ್ರ ಬರೆದು ವಿದ್ಯಾರ್ಥಿ ಹೋಗಿದ್ದಾನೆ. ಬೆಂಗಳೂರಿನ ಬಿಇಎಲ್ ಕಾಲೇಜಿನಲ್ಲಿ ಬಿಕಾಂ ಓದುತ್ತಿದ್ದ ಮೋಹಿತ್ ಋಷಿ ನಾಪತ್ತೆಯಾಗಿರುವ ವಿದ್ಯಾರ್ಥಿ. ಈ ಕುರಿತು ವಿದ್ಯಾರ್ಥಿ ಪೋಷಕರಿಂದ ಕೋಡಿಗೆಹಳ್ಳಿ ಠಾಣೆಗೆ ದೂರು ನೀಡಿದ್ದಾರೆ.
ಸದ್ಯ ವಿದ್ಯಾರ್ಥಿ ಕುಂಭಮೇಳ ನಡೆಯುತ್ತಿರುವ ಪ್ರಯಾಗ್ ರಾಜ್ ಗೆ ಹೋಗಿರುವ ಶಂಕೆ ವ್ಯಕ್ತವಾಗುತ್ತಿದೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಜ. 16ರ ಬೆಳಗಿನ ಜಾವ 4 ಗಂಟೆ ವೇಳೆಗೆ ವಿದ್ಯಾರ್ಥಿ ಇದ್ದಕ್ಕಿದ್ದಂತೆ ಮನೆ ಬಿಟ್ಟು ಹೋಗಿದ್ದಾನೆ. ತನ್ನ ನೋಟ್ ಬುಕ್ ನಲ್ಲಿ ಅಸತ್ಯದ ಪ್ರಪಂಚದಲ್ಲಿ ಸತ್ಯ ಹುಡುಕಲು ಹೋಗುತ್ತಿದ್ದೇನೆಂದು ಬರೆದುಕೊಂಡಿದ್ದಾನೆ. ವಿದ್ಯಾರಣ್ಯಪುರದ ನಿವಾಸಿಯಾಗಿರುವ ವಿದ್ಯಾರ್ಥಿಯ ತಂದೆ ಅರ್ಜುನ್ ಕುಮಾರ್ ದೂರು ಸಲ್ಲಿಸಿ, ಮಗನನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.