ಕೋಲಾರ : ಕೆಜಿಎಫ್ ತಾಲ್ಲೂಕಿನ ಚಿನ್ನನಾಗನಹಳ್ಳಿ ಗ್ರಾಮದ ಕುಸುಮಾ (16) ಅಸಾಧಾರಣ ಧೈರ್ಯ ತೋರಿದ್ದಾಳೆ. ಇತ್ತೀಚೆಗೆ ಸಂಭವಿಸಿದ ಅಪಘಾತದಲ್ಲಿ ಕಾಲು ಕಳೆದುಕೊಂಡ ಕುಸುಮಾ, ತಾಯಿಯ ಸಹಾಯದೊಂದಿಗೆ ಆಂಬುಲೆನ್ಸ್ ಮೂಲಕ ಸೆಂಟ್ ಜೋಸೆಫ್ ಶಾಲೆ ಪರೀಕ್ಷಾ ಕೇಂದ್ರಕ್ಕೆ ಬಂದು ಪರೀಕ್ಷೆ ಬರೆದಿದ್ದಾರೆ.

ಸದ್ಯ ಶಸ್ತ್ರ ಚಿಕಿತ್ಸೆಗೊಂಡು ಆಸ್ಪತ್ರೆಯಲ್ಲಿ ಇದ್ದರೂ, ಸ್ಟ್ರಚರ್ ಬೆಡ್ ಮೇಲೆಯೇ ಮಲಗಿಕೊಂಡು ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಬರೆದ ಕುಸುಮಾ, ವಿದ್ಯಾರ್ಥಿ ಜೀವನದಲ್ಲಿ ಸಂಕಷ್ಟಗಳನ್ನು ಜಯಿಸುವ ಮನೋಬಲವನ್ನು ತೋರಿದ್ದಾರೆ. ಈಕೆ ಕೆಜಿಎಫ್‌ನ ಸೆಂಟ್ ಮೇರಿಸ್ ಹೈ ಸ್ಕೂಲ್ ವಿದ್ಯಾರ್ಥಿನಿಯಾಗಿದ್ದಾರೆ.
ಕೆಜಿಎಫ್ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಜಿ. ನಾರಾಯಣಸ್ವಾಮಿ ಮತ್ತು ಶಿಕ್ಷಕರು ಪರೀಕ್ಷೆ ಬರೆಯಲು ವಿಶೇಷ ಅನುಮತಿ ನೀಡಿ ಸಹಕರಿಸಿದ್ದಾರೆ. ಕುಸುಮಾ ಅವರ ಧೈರ್ಯ ಮತ್ತು ನಿಷ್ಠೆ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.
ಇದನ್ನೂ ಓದಿ : SSLC ವಿದ್ಯಾರ್ಥಿಗಳಿಗೆ ಪೆನ್, ಚಾಕಲೇಟ್ ನೀಡಿ ‘ಆಲ್ ದಿ ಬೆಸ್ಟ್’ ಹೇಳಿದ ಶಾಸಕ ಸುರೇಶ್ ಬಾಬು



















