ಶಿವಮೊಗ್ಗ: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಕಲ ಸಿದ್ಧತೆ ನಡೆಯುತ್ತಿದೆ. ನಾಳೆಯಿಂದ ದಸರಾ ದರ್ಬಾರ್ ನಡೆಯಲಿದೆ. ಈ ಮಧ್ಯೆ ರಾಜ್ಯದ ಹಲವು ಜಿಲ್ಲೆಗಳಲ್ಲೂ ಮೈಸೂರಿನಂತೆಯೇ ದಸರಾ ಆಚರಿಸಲಾಗುತ್ತಿದೆ. ಶಿವಮೊಗ್ಗದಲ್ಲಿಯೂ ದಸರಾವನ್ನು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಹೀಗಾಗಿ ಸಕ್ರೆಬೈಲಿನ ಆನೆ ಬಿಡಾರದಲ್ಲಿನ ಮೂರು ಆನೆಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ.
ದಶಕಗಳಿಂದ ಶಿವಮೊಗ್ಗದಲ್ಲಿ ದಸರಾ ಜಂಬೂ ಸವಾರಿಯು ಅದ್ಧೂರಿಯಾಗಿ ನಡೆಯುತ್ತಿದೆ. ನಾಡದೇವಿ ಚಾಮುಂಡೇಶ್ವರಿಯ ಮೆರವಣಿಗೆ ಮೈಸೂರು ಮಾದರಿಯಲ್ಲಿಯೇ ಆನೆಯಿಂದ ನಡೆಯುತ್ತದೆ. ಶಿವಮೊಗ್ಗ ದಸರಾ ಹಬ್ಬಕ್ಕಾಗಿ ಮೂರು ಆನೆಗಳಿಗೆ ವಿಶೇಷ ಆಹ್ವಾನ ನೀಡಲಾಗಿದೆ. ಶಿವಮೊಗ್ಗದ ಜಂಬೂ ಸವಾರಿಗಾಗಿ ಸಕ್ರೆಬೈಲು ಆನೆಬಿಡಾರದ ಸಾಗರ್, ಬಾಲಣ್ಣ ಹಾಗೂ ಬಹದ್ಹೂರ್ ಆನೆಗಳಿಗೆ ಶಿವಮೊಗ್ಗ ನಗರ ಬಿಜೆಪಿ ಶಾಸಕ ಚೆನ್ನಬಸಪ್ಪ ಹಾಗೂ ಪಾಲಿಕೆ ಆಯುಕ್ತೆ ಕವಿತಾ ನೇತೃತ್ವದಲ್ಲಿ ಆಹ್ವಾನ ನೀಡಲಾಗಿದೆ.
ಇದೇ ಮೊದಲ ಬಾರಿಗೆ ಆನೆ ಬಿಡಾರದಿಂದ ಮೂರು ಗಂಡಾನೆಗಳನ್ನು ಕಳಿಸಲಾಗುತ್ತಿದೆ. ಈ ಹಿಂದೆ ಸಾಗರ್ , ನೇತ್ರಾವತಿ, ಬಾನುಮತಿ ಆನೆಗಳು ಭಾಗವಹಿಸುತ್ತಿದ್ದವು. ಈ ಬಾರಿ ಎರಡು ಆನೆಗಳು ಮರಿ ಹಾಕಿರುವುದರಿಂದ ಮೂರು ಗಂಡಾನೆಗಳು ಆಗಮಿಸಿವೆ. ಅಂಬಾರಿಯನ್ನು ಸಾಗರ್ ಹೊತ್ತು ನಡೆದರೆ ಬಾಬಣ್ಣ ಹಾಗೂ ಬಹದ್ಹೂರ್ ಆನೆಗಳು ಸಾಥ್ ನೀಡಲಿವೆ.