ಗ್ವಾಲಿಯರ್ : ರೈಲಿನಲ್ಲಿ ಮಹಿಳೆ ಮೇಲೆ ಕುಡಿದ ಮತ್ತಿನಲ್ಲಿ ಯೋಧ ಮೂತ್ರ ವಿಸರ್ಜನೆ ಮಾಡಿರುವ ಘಟನೆಯೊಂದು ವರದಿಯಾಗಿದೆ. ಈ ಕುರಿತು ಪ್ರಧಾನಿ ಕಚೇರಿಗೆ ದೂರು ಸಲ್ಲಿಸಲಾಗಿದೆ.
ಮಗುವಿನೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆ ಮೇಲೆಯೇ ಮೂರ್ತ ವಿಸರ್ಜನೆ ಮಾಡಿ ಆಕೆಯ ಮೇಲೆ ಬಿದ್ದಿದ್ದಾನೆ ಎನ್ನಲಾಗಿದೆ. ದೆಹಲಿಯಿಂದ ಚತ್ತೀಸಘಡದ ದುರ್ಗ್‌ಗೆ ತೆರಳುತ್ತಿದ್ದ ಗೊಂಡ್ವಾನ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ಮಹಿಳೆಯ ದೂರಿಗೆ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರಧಾನಿ ಕಚೇರಿಗೆ ದೂರು ನೀಡಲಾಗಿದೆ.
ಮಹಿಳೆ ಹಾಗೂ ಆಕೆಯ ಮಗು 23ನೇ ಸಂಖ್ಯೆ ಸೀಟಿನಲ್ಲಿ ಮಲಗಿತ್ತು. ಇದು ತಳಭಾಗದ ಸೀಟಾಗಿತ್ತು. ಅಪ್ಪರ್ ಸೀಟಿನಲ್ಲಿ ಯೋಧ ಮೂತ್ರ ವಿಸರ್ಜನೆ ಮಾಡಿದ್ದಾನೆ. ಮೇಲಿನಿಂದ ಕೆಳಕ್ಕೆ ಮೂತ್ರವಿರ್ಸಜನೆ ಮಾಡಿದ ಯೋಧ ದಪ್ಪನೆ ಮೇಲಿನಿಂದ ಮಹಿಳೆ ಮೇಲೆ ಬಿದ್ದಿದ್ದಾನೆ. ಯೋಧ ಬಿದ್ದ ರಭಸಕ್ಕೆ ಮಹಿಳೆ ಹಾಗೂ ಮಗು ಎಚ್ಚರಗೊಂಡಿದ್ದಾರೆ. ಅಲ್ಲದೇ, ಗಾಯಗೊಂಡಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.
ಚತ್ತೀಸಘಡ ಮೂಲದ ಮಹಿಳೆ ತಕ್ಷಣವೇ ಪತಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಪತಿ ರೈಲ್ವೇ ಸಹಾಯವಾಣಿಗೆ ಕರೆ ಮಾಡಿ ದೂರು ನೀಡಿದ್ದರೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ಬೇಸತ್ತ ಮಹಿಳೆ ಪತಿ ಪ್ರಧಾನಿ ಕಚೇರಿಗೆ ದೂರು ನೀಡಿದ್ದಾರೆ. ಹಲವರು ಈ ಘಟನೆ ಕುರಿತು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
