ಬೆಳಗಾವಿ: ತನಗಿಂತ 14 ವರ್ಷ ಹಿರಿಯ ಮಹಿಳೆಯನ್ನು ವಿವಾಹವಾಗಿ ಸೈನಿಕನೊಬ್ಬ ಕೈ ಕೊಟ್ಟಿದ್ದಾರೆಂಬ ಆರೋಪ ಇತ್ತೀಚೆಗೆ ಕೇಳಿ ಬಂದಿತ್ತು. ಈಗ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ರಾಜ್ಯ ಮಹಿಳಾ ಹೋರಾಟಗಾರ್ತಿ ಪ್ರಮೋದಾ ಹಜಾರೆ(Pramoda Hazare) ಎಂಬುವವರು ಯೋಧನ ಮೇಲೆ ಈ ರೀತಿ ಗಂಭೀರ ಆರೋಪ ಮಾಡಿದ್ದಾರೆ. ನಗರದ ಮಚ್ಚೆ ಗ್ರಾಮದ ನಿವಾಸಿ, ಹೋರಾಟಗಾರ್ತಿ ಪ್ರಮೋದಾ ಹಜಾರೆ, ಬಿಜಗರ್ಣಿ ಗ್ರಾಮದ ಯೋಧ ಅಕ್ಷಯ್(Akshay) ನಲವಡೆ ವಿರುದ್ಧ ವಂಚಿಸಿರುವ ಆರೋಪ ಮಾಡಿದ್ದಾರೆ. ಮದುವೆಯಾಗಿ ವಂಚಿಸಿರುವ ಯೋಧನ ವಿರುದ್ಧ ಹೋರಾಟಕ್ಕೆ ಮುಂದಾಗಿದ್ದಾರೆ.
ಹೀಗಾಗಿ ಅಕ್ಷಯ ನಲವಡೆ ಸೇರಿದಂತೆ ಐವರ ವಿರುದ್ಧ ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ (police station) ಎಫ್ಐಆರ್ ದಾಖಲಿಸಿದ್ದಾರೆ. 2019ರಲ್ಲಿ ಯೋಧ ಹಾಗೂ ನನ್ನ ಮಧ್ಯೆ ಪರಿಚಯವಾಗಿತ್ತು. 2020ರ ಮಾರ್ಚ್ 12ರಂದು ಬೆಳಗಾವಿ ಮನೆಯೊಂದರಲ್ಲಿ ಮದುವೆ ಆಗಿದ್ದೇವೆ. ಆದರೆ, ಈಗ ಅಕ್ಷಯ ಮತ್ತೊಂದು ಮದುವೆಗೆ ಸಿದ್ಧನಾಗಿದ್ದಾನೆ ಎಂದು ಪ್ರಮೋದಾ ಹಜಾರೆ ದೂರು ನೀಡಿದ್ದಾರೆ.
14 ವರ್ಷ ಚಿಕ್ಕವನಾಗಿದ್ದರಿಂದ ಲವ್ ಬೇಡ ಅಂದರೂ ಪೀಡಿಸಿ ಪ್ರೀತಿಸಿ ಮದುವೆಯಾಗಿ ಅಕ್ಷಯ ಮೋಸ ಮಾಡಿದ್ದಾನೆ. ತನಗೆ ಮಾತ್ರ ಅಲ್ಲ ಇನ್ನೂ 11ಕ್ಕೂ ಅಧಿಕ ಯುವತಿಯರಿಗೆ ಮೋಸ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಅಕ್ಷಯ, ಭಾರತೀಯ ಸೇನೆಯ ಕೋಲ್ಕತ್ತಾದ ಈಸ್ಟರ್ನ್ ಕಮಾಂಡ್ ಸಿಗ್ನಲ್ ರೆಜೆಮೆಂಟ್(Eastern Command Signal Regiment, Kolkata) ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆತ ಸೇನೆಯಿಂದ ರಜೆಗೆ ಬಂದಾಗ ಹದಿನೈದು ದಿನಗಳ ಕಾಲ ಪ್ರಮೋದಾ ಬಳಿ ಇರುತ್ತಿದ್ದ ಎಂದು ಹೇಳಿದ್ದಾರೆ.
ಇತ್ತೀಚೆಗೆ ಅಕ್ಷಯ್ ರಜೆಗೆ ಬಂದಾಗ ಯುವತಿಯೊಬ್ಬರೊಂದಿಗೆ ಎಂಗೇಜ್ಮೆಂಟ್ ಮಾಡಿಕೊಂಡಿರುವ ವಿಚಾರ ತಿಳಿದು ಪ್ರಮೋದಾ, ಅವರ ಮನೆಗೆ ಹೋಗಿದ್ದರು. ಆಗ ರಂಪಾಟವೇ ನಡೆದಿದೆ. ಈಗ ಮೋಸ ಮಾಡುತ್ತಿದ್ದಾನೆಂದು ಮಹಿಳೆ ಆರೋಪಿಸಿದ್ದಾರೆ.